NobleBlocks

From the research index

The paper comes from the research index. It wasn’t submitted here.

Journal article

೨೧ನಯ ಶತಮನದ ಕನನಡ ನಟಕ ಮತತ ರಗಭಮಯಲಲ ಡ. ಬ. ಆರ. ಅಬಡಕರ

ನಾಗೇಶ್ ಎನ್.

Zenodo (CERN European Organization for Nuclear Research)25 May 2025Open access

Abstract

No PDF here

The full text is at the publisher

You can read the abstract here, or open it at the publisher.

Read at the publisher

ರಂಗಭೂಮಿಯೊಂದು ಜಾಗತೀಕ ಕಲಾಭಿವ್ಯಕ್ತಿ ಮಾಧ್ಯಮವಾಗಿದೆ, ನಾಟಕವು ಜಗತ್ತಿನ ಸಾಂಸ್ಕೃತಿಕ ಸೃಜನಶೀಲತೆಯ ಅಸ್ಮಿತೆಯ ಭಾಗವಾಗಿ ಲೋಕದರ್ಶನವನ್ನು ಒಡಮೂಡಿಸುವಲ್ಲಿ ಪ್ರಮುಖ ಸಾಹಿತ್ಯ ಪ್ರಕಾರವಾಗಿದೆ. ಶ್ರೇಷ್ಠ ದಾರ್ಶನಿಕರಾದ ಬುದ್ಧ, ಬಸವಣ್ಣ, ಡಾ. ಬಿ. ಆರ್. ಅಂಬೇಡ್ಕರ್‌, ಜ್ಯೋತಿ ಬಾ ಪುಲೆ, ಪೆರಿಯಾರ್, ನಾರಾಯಣಗುರುಗಳಂತಹ ಆದರ್ಶಪ್ರಾಯರಾದವರ ಜೀವನ ಆಧಾರಿತ ನಾಟಕಗಳನ್ನು ರಂಗರೂಪಕ್ಕೆ ತಂದು ಸಮುದಾಯಗಳತ್ತ ತೆಗೆದುಕೊಂಡು ಹೋಗುವ ಅನಿವಾರ್ಯತೆ ಈ ನಾಡಿಗಿದೆ. ಅಂಬೇಡ್ಕರ್‌ ಅವರು ʼತಳಸಮುದಾಯಗಳಿಗೆ ಮಾತ್ರವಲ್ಲದೆ ಎಲ್ಲ ಸಮುದಾಯಗಳಿಗೂ ಅಕ್ಷರದ ಮೂಲಕ ವಿಮೋಚನೆ ಸಾಧ್ಯ’ ಎಂಬುದನ್ನು ತಿಳಿಸಿಕೊಟ್ಟರು. ಇವರ ಬದುಕು, ಬರಹ ಮತ್ತು ಭಾಷಣಗಳಲ್ಲಿನ ಚಿಂತನಾಧಾರೆಗಳನ್ನು ಕನ್ನಡ ನಾಟಕ ಮತ್ತು ರಂಗಭೂಮಿಗೆ ಅಳವಡಿಕೊಳ್ಳುವುದರ ತುರ್ತು ಇದೆ. ಈ ನಿಟ್ಟಿನಲ್ಲಿ ಸಾಕಷ್ಟು ರಂಗಕರ್ಮಿಗಳು ಮತ್ತು ನಾಟಕಕಾರರು ದಾಪುಗಾಲು ಇಟ್ಟಿರುವುದು ಭವಿಷ್ಯದ ಭರವಸೆಯ ಧ್ಯೋತಕವಾಗಿದೆ. ಹೊಸ ತಲೆಮಾರಿನ ರಂಗ ನಿರ್ದೇಶಕರಾದ ಕೆ. ಪಿ. ಲಕ್ಷ್ಮಣ್ ಅವರು ತಮ್ಮ ರಂಗರೂಪಗಳಾದ ʼದಕ್ಲಕಥಾ ದೇವಿ ಕಾವ್ಯ’, ʼಪಂಚಮ ಪದ’ ಮತ್ತು ʼಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ನಾಟಕಗಳಲ್ಲಿ ಡಾ ಬಿ. ಆರ್, ಅಂಬೇಡ್ಕರ್‌ ಅವರ ತತ್ವಸಿದ್ಧಾಂತಗಳನ್ನು ಅಳವಡಿಸಿಕೊಂಡಿರುವುದು ವಿಶೇಷವಾಗಿದೆ. ʼಪಂಚಮ ಪದ’ ರಂಗರೂಪದಲ್ಲಿ ತಳಸಮುದಾಯಗಳ ಜೀವನಚರಿತ್ರೆಯನ್ನು ದೃಶ್ಯಕಾವ್ಯವಾಗಿಸಿರುವುದು ದಲಿತ ಚಳುವಳಿಗಳು ರೂಪುಗೊಂಡ ಇತಿಹಾಸವನ್ನು ನೆನಪಿಸುತ್ತದೆ. ಈ ರಂಗರೂಪವು ವ್ಯಕ್ತಿ ಘನತೆಯ ಗುರುತುಗಳನ್ನು ಕಂಡುಕೊಳ್ಳುವ ಮಾರ್ಗವಾಗಿದೆ. ಈಗೆ ಹಲವಾರು ನಾಟಕಕಾರರು ಹಾಗೂ ನಾಟಕಕಾರ್ತಿಯರು ತಮ್ಮ ನಾಟಕಗಳಲ್ಲಿ ಸಂವಿಧಾನಾತ್ಮಕ ಚಿಂತನೆಗಳ ಎಳೆಗಳನ್ನು ತಂದಿರುವುದು ಗುರುತಿಸಬಹುದು.

Identifiers

Discussion

Citations

Topics

Details

Published
25 May 2025
Publisher
European Organization for Nuclear Research
Language
KN

More

Suggest a correction or report