NobleBlocks

Research indexJournal article

ಮಕಕಳ ಕಥ ಸಹತಯ

ಟಿ.

Zenodo (CERN European Organization for Nuclear Research)30 Nov 2024Open access

NobleIDark:/48914/w1/20260515/EED976ADDOI10.5281/zenodo.14246360

Free to read at the publisher

You can read the abstract here, or the full text at the publisher.

Read at the publisher

Abstract

ನಮ್ಮ ಕನ್ನಡ ಸಾಹಿತ್ಯಕ್ಕೆ ಸುದೀರ್ಘವಾದ ಇತಿಹಾಸವಿದೆ. ಪೂರ್ವದ ಹಳೆಗನ್ನಡ, ಹಳೆಗನ್ನಡ, ನಡುಗನ್ನಡ, ಹೊಸಗನ್ನಡ, ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ ಸಾಹಿತ್ಯ ಎಂಬ ಕಾಲಘಟ್ಟದಲ್ಲಿ ಇಂದು ಹೆಮ್ಮರವಾಗಿ ಬೆಳೆದು ನಿಂತಿರುವುದನ್ನು ನಾವು ಕಾಣಬಹುದು. ಇಪ್ಪತ್ತನೆಯ ಶತಮಾನ ʼಅತ್ಯಂತ ವಿಶಿಷ್ಟವಾದ’ ಯುಗ ಎಂದು ಪರಿಗಣಿತವಾಗಿದ್ದು, ಈ ಕಾಲಘಟ್ಟದಲ್ಲಿ ಮಹಾಕಾವ್ಯ, ಭಾವಗೀತೆ, ಸಣ್ಣಕಥೆ, ಕಾದಂಬರಿ, ಪ್ರಬಂಧ, ನಾಟಕ, ಪ್ರವಾಸ ಸಾಹಿತ್ಯ, ವಿಚಾರಸಾಹಿತ್ಯ ಆತ್ಮಕಥೆ, ಜೀವನಚರಿತ್ರೆ ಇತ್ಯಾದಿ ಪ್ರಕಾರಗಳೆಲ್ಲವನ್ನು ಮೈಗೂಡಿಸಿಕೊಂಡು ಸಮೃದ್ಧವಾಗಿ ಬೆಳೆಯುತ್ತಿದೆ. ಇವುಗಳಲ್ಲಿ “ಮಕ್ಕಳ ಸಾಹಿತ್ಯ”ವೂ ಒಂದು. ಕನ್ನಡ ಸಾಹಿತ್ಯದಲ್ಲಿ ʼಮಕ್ಕಳ ಸಾಹಿತ್ಯದ’ ಬೇರನ್ನು ಜಾನಪದ ಪರಂಪರೆಯಲ್ಲಿಯೇ ಕಾಣಬಹುದಾದರೂ ʼಮಕ್ಕಳ ಸಾಹಿತ್ಯ’ ಎಂಬ ಹೆಸರನ್ನು ಹೊತ್ತು ಪ್ರತ್ಯೇಕ ಸಾಹಿತ್ಯ ಪ್ರಕಾರವಾಗಿ ಬೆಳೆದು ಬಂದದ್ದು ʼನವೋದಯ ಸಾಹಿತ್ಯ’ದ ಕಾಲಘಟ್ಟದಲ್ಲಿ. ʼಮಕ್ಕಳ ಸಾಹಿತ್ಯ ಎಂದರೇನು?’ ಮಕ್ಕಳ ಸಾಹಿತ್ಯವನ್ನು ಏಕೆ ಪ್ರತ್ಯೇಕ ಪ್ರಕಾರವಾಗಿ ನೋಡಬೇಕು? ಮಕ್ಕಳ ಸಾಹಿತ್ಯದ ಮಹತ್ವ, ಮಕ್ಕಳ ಸಾಹಿತ್ಯದ ಉಗಮ, ಬೆಳವಣಿಗೆ, ಮಕ್ಕಳ ಸಾಹಿತ್ಯದ ಸ್ವರೂಪ ಈ ಅಂಶಗಳನ್ನು ಆಧರಿಸಿ ಬರೆದ ಲೇಖನ ಇದಾಗಿದೆ.

Discussion

Topics

More

Suggest a correction or report