NobleBlocks

Research indexJournal article

ತಳನಡನಲಲ ನಗರಧನಯ ಸವರಪ ಮತತ ಸಥತಯತರ

Priya

Zenodo (CERN European Organization for Nuclear Research)31 Aug 2025Open access

NobleIDark:/48914/w1/20260525/6171C1CDDOI10.5281/zenodo.17200562

Free to read at the publisher

You can read the abstract here, or the full text at the publisher.

Read at the publisher

Abstract

ಪೀಠಿಕೆ ನಾಗಾರಾಧನೆಯು ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಆಚರಿಸಲ್ಪಡುವ ಒಂದು ವಿಶೇಷ ಆರಾಧನೆ. ಆಯಾ ಪ್ರದೇಶಗಳಿಗೆ ಅನುಗುಣವಾಗಿ ಇದರ ಆರಾಧನೆ ಇರುತ್ತದೆ. ಭಾರತದಲ್ಲಿ ಮಾತ್ರವಲ್ಲ, ಸುಮೇರಿಯಾ, ಬ್ಯಾಬಿಲೋನಿಯಾ, ಉರಿಸ್ತಾನ್, ಇರಾನ್, ಚೀನಾ ಮತ್ತು ಆಫ್ರಿಕಾದಲ್ಲಿಯೂ ಸಹ ಈ ನಾಗಾರಾಧನೆಯು ಬೇರೆ ಬೇರೆ ರೀತಿಯಲ್ಲಿ ನಡೆದುಕೊಂಡು ಬಂದಿರುವುದನ್ನು ಕಾಣಬಹುದು.ಈಜಿಪ್ಟಿನ ದೇವತೆ ಸೆಬ್ ಹಾವುಗಳ ರಾಜ. ಗ್ರೀಸ್‌ನಲ್ಲಿ, ಜೀವಂತ ಹಾವುಗಳನ್ನು ಪರ್ವದಿನಗಳಲ್ಲಿ ‘ಭೂಮಿ ಪುತ್ರ’ಎಂಬ ನಂಬಿಕೆಯಲ್ಲಿ ಪೂಜಿಸಲಾಗುತ್ತಿತ್ತು,ಬುದ್ಧನ ಜಾತಕ ಕಥೆಗಳಲ್ಲಿ ನಾಗರಕಥೆಗಳು ಸೇರಿವೆ. ಜೈನ ತೀರ್ಥಂಕರರ ವಿಗ್ರಹಗಳಲ್ಲಿ ನಾಗತಲೆಗಳ ಚಿತ್ರಗಳೂ ಇವೆ. ಭಾರತದಲ್ಲಿ ಹಾವು ಫಲವತ್ತತೆಯ ಸಂಕೇತವೆಂದು ನಂಬಲಾಗಿದೆ. (ಅಮೃತ ಸೋಮೇಶ್ವರ :ತುಳುವ ಜನಪದ ಲೋಕ :ಪು.೧೬) ಭಾರತದಲ್ಲಿ ನಾಗಾರಾಧನೆಯು ಬೇರೆ ಬೇರೆ ಪ್ರಕಾರಗಳಲ್ಲಿ ನಮಗೆ ದೊರೆಯುತ್ತದೆ. ಈ ದೇಶದಲ್ಲಿ ನಾಗನಿಗೆ ಸಿಗುವಷ್ಟು ಪ್ರಾಶಸ್ತ್ಯ ಬೇರೆ ಯಾವುದೇ ದೇಶದಲ್ಲಿ ಸಿಗಲು ಸಾಧ್ಯವಿಲ್ಲ. ಶಿವ, ವಿಷ್ಣು ಮತ್ತು ಗಣೇಶನೊಂದಿಗೆ ನಾಗರಹಾವುಗಳು ಇರುತ್ತವೆ. ಸುಬ್ರಹ್ಮಣ್ಯ ನಾಗರೂಪಿ. ನಮ್ಮ ಜಾನಪದ ಸಾಹಿತ್ಯದಲ್ಲಿ ನಾಗನಿಗೆ ವಿಶೇಷ ಸ್ಥಾನವಿದೆ. ನಾಗರ ಪಂಚಮಿಯನ್ನು ದೊಡ್ಡ ಹಬ್ಬವಾಗಿ ಆಚರಿಸುವುದನ್ನು ನಾವು ನೋಡುತ್ತೇವೆ. ತುಳುನಾಡು ನಾಗಾರಾಧನೆಯ ಸಂಪ್ರದಾಯಗಳು ಇನ್ನೂ ಜೀವಂತವಾಗಿರುವ ಪ್ರಮುಖ ಪ್ರದೇಶವಾಗಿದೆ. ಇದು ‘ನಾಗಗಳ ಭೂಮಿ’ ಎಂಬ ಪೌರಾಣಿಕ ಉಲ್ಲೇಖವೂ ಇದೆ. ತುಳುನಾಡಿನ ವಿವಿಧ ಸ್ಥಳಗಳಲ್ಲಿ ಬ್ರಹ್ಮ, ನಾಗಬ್ರಹ್ಮ, ನಾಗಲಿಂಗ, ಬ್ರಹ್ಮಲಿಂಗ, ಬೆರ್ಮೆರೆೆ ಶೇಷೆ, ಅನಂತಪದ್ಮನಾಭ, ಸುಬ್ರಹ್ಮಣ್ಯ ಹೀಗೆ ಬೇರೆ ಬೇರೆ ಹೆಸರುಗಳಿಂದ ಪೂಜಿಸಲಾಗುತ್ತದೆ. ತುಳುನಾಡಿಗೆ 'ಅಲುಕ' ಎಂಬ ಪ್ರಾಚೀನ ಹೆಸರಿತ್ತು ಎಂದು ಹೇಳಲಾಗುತ್ತದೆ. 'ಅಲುಕ' ಎಂದರೆ ಹಾವುಗಳ ರಾಜ. ಶಂಖಕುಲದ ನಾಗವಂಶಿಗಳು ತುಳುನಾಡಿನಲ್ಲಿ ವಾಸಿಸುತ್ತಿದ್ದರು ಎಂಬುದು ಗೋವಿಂದ ಪೈ ಅವರ ಅಭಿಪ್ರಾಯ. ತುಳುನಾಡಿನಲ್ಲಿ ಪ್ರಕೃತಿಯೊಂದಿಗೆ ಬದುಕುವ ಹಾವನ್ನು ಪೂಜಿಸಲಾಗುತ್ತದೆ, ಇದು ಜನರ ಭಯ ಮತ್ತು ಭಕ್ತಿಗೆ ಕಾರಣವಾಗಿದೆ. ತುಳುನಾಡು ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾದ ನಾಡು. ಇಲ್ಲಿನ ಕಾಡುಗಳು ಹಾವಿನ ಸಂತತಿಯ ಬೆಳವಣಿಗೆಗೆ ಪೂರಕ ವಾತಾವರಣದಲ್ಲಿವೆ. ತುಳುನಾಡಿನಲ್ಲಿ ಹಾವನ್ನು ಪ್ರಕೃತಿಯ ಶಕ್ತಿಯಾಗಿ ಪೂಜಿಸುವುದನ್ನು ನಾವು ಕಾಣಬಹುದು

Discussion

Topics

More

Suggest a correction or report