NobleBlocks

Research indexJournal article

ನವಯ ಸಹತಯದ ಉಗಮ ಮತತ ವಕಸ

ಎ., SUDHAKARAN

Zenodo (CERN European Organization for Nuclear Research)18 Dec 2025Open access

NobleIDark:/48914/w1/20260525/5005B60CDOI10.5281/zenodo.18103130

Free to read at the publisher

You can read the abstract here, or the full text at the publisher.

Read at the publisher

Abstract

ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖವಾದ ಕಾಲಘಟ್ಟಗಳಲ್ಲಿ ನವ್ಯ ಸಾಹಿತ್ಯವೂ ಕೂಡ ಒಂದಾಗಿದೆ. ಸಾಮಾನ್ಯವಾಗಿ ಕಾಲ-ಕಾವ್ಯ, ಪರಿಸರದ ತುರ್ತಿಗೆ ಅನುಗುಣವಾಗಿ ಬದಲಾಗಬೇಕಾದುದು ಜೀವಂತಿಕೆಯ ಭಾಷೆಯ ಸಹಜ ಕ್ರಿಯೆ. ಅಂತೆಯೇ ಆಧುನಿಕ ಸಾಹಿತ್ಯದ ಸಂದರ್ಭದಲ್ಲಿ ನವ್ಯ ಕಾಣಿಸಿಕೊಳ್ಳುತ್ತದೆ. ನವೋದಯದ ಉತ್ತಂಗದ ನಂತರದಲ್ಲಿ ಪ್ರಗತಿಶೀಲ ಚಳುವಳಿ ಕಾಣಿಸಿಕೊಂಡಿತಾದರೂ, ಅದು ನವೋದಯಕ್ಕೆ ಗಟ್ಟಿಯಾದ ಪರ್ಯಾಯವಾಗಲಿಲ್ಲ ಮತ್ತು ಪ್ರಗತಿಶೀಲರ ಕಾಲದಲ್ಲಿ ಹೆಚ್ಚು ಕಾವ್ಯ ಸೃಷ್ಟಿಯೂ ಆಗಲಿಲ್ಲ. ಇಲ್ಲಿ ಕಾದಂಬರಿಯ ಕ್ಷೇತ್ರ ಹುಲುಸಾಯಿತು. ಇಂತಹ ಸಂದರ್ಭದಲ್ಲಿ ನವೋದಯ ಸಾಹಿತ್ಯಕ್ಕೆ ಪರ್ಯಾಯವೆಂಬಂತೆ ಕಾಣಿಸಿಕೊಂಡದ್ದು ನವ್ಯ ಕಾವ್ಯ. ನವೋದಯ ಕಾವ್ಯದ ಮುಕ್ತಾಯವನ್ನು ಘೋಷಿಸುತ್ತಾ, ನವ್ಯವೇ ಅದಕ್ಕೆ ಪರ್ಯಾಯವೆನ್ನುವ ಸ್ವಯಂ ಘೋಷಣೆಯೊಂದಿಗೆ ನವ್ಯರು ಸಾಹಿತ್ಯ ಕೃಷಿಯನ್ನು ಆರಂಭಿಸಿದರು. ನವೋದಯ ಕಾವ್ಯ ಸಾಧಿಸಿದ ಯಶಸ್ಸು, ಸಹೃದಯರ ಮೇಲೆ ಬೀರಿದ ಪ್ರಭಾವಗಳೆಲ್ಲವೂ ಅರಿವಿರುವ ಸಂದರ್ಭದಲ್ಲಿ ಅದನ್ನು ಮೀರಿದ ಹಾಗೆ ಅಥವಾ ಪರ್ಯಾಯ ಎನ್ನುವ ಹಾಗೆ ಮತ್ತೊಂದು ಸಾಹಿತ್ಯ ಪರಂಪರೆ ಬೆಳೆದು ನಿಲ್ಲುವುದು ಸಾಮಾನ್ಯ ಸಂಗತಿಯಾಗಿರಲಿಲ್ಲ ಎನ್ನುವುದನ್ನು ನಾವು ಮರೆಯುವಂತಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಅಸ್ತಿತ್ವ ಕಂಡುಕೊಂಡ ನವೋದಯಕ್ಕೂ, ಸ್ವಾತಂತ್ರ್ಯ ನಂತರದಲ್ಲಿ ಅಸ್ತಿತ್ವ ಗುರುತಿಸಿಕೊಳ್ಳುವ ನವ್ಯಕ್ಕೂ ಬಹಳಷ್ಟು ಅಂತರಗಳು, ಭಿನ್ನತೆಗಳು ಇವೆ. ಎರಡರ ಸಂದರ್ಭಗಳು ಸವಾಲುಗಳು ಬೇರೆ ಬೇರೆಯಾಗಿದ್ದವು. ಹಾಗೆಯೇ ಅವುಗಳು ಸಾಧಿಸಿದ ಯಶಸ್ಸು ಸಹ ವಿಭಿನ್ನವಾದುದೇ ಆಗಿತ್ತು.

Discussion

Topics

More

Suggest a correction or report