Research indexJournal article
ಗರಕ ನಗರ ರಜಯಗಳದ ಆಧನಕ ರಷಟರ ರಜಯಗಳವರಗ ಪಲಟ ಮತತ ಅರಸಟಟಲ ಅವರ ರಜಕಯ ಚತನಗಳ ಪರಸತತತ
Gowda
International Journal of Kannada Research1 Jan 2024Open access
NobleIDark:/48914/w1/20260526/B79E5082DOI10.22271/24545813.2024.v10.i3a.1213
ಗರಕ ನಗರ ರಜಯಗಳದ ಆಧನಕ ರಷಟರ ರಜಯಗಳವರಗ ಪಲಟ ಮತತ ಅರಸಟಟಲ ಅವರ ರಜಕಯ ಚತನಗಳ ಪರಸತತತ
Gowda · International Journal of Kannada Research · 2024
NobleIDark:/48914/w1/20260526/B79E5082DOI10.22271/24545813.2024.v10.i3a.1213
Abstract
ರಾಜಕೀಯ ವಿಜ್ಞಾನದ ಬೌದ್ಧಿಕ ಇತಿಹಾಸದಲ್ಲಿ ಪ್ರಾಚೀನ ಗ್ರೀಕ್ ತತ್ವಜ್ಞಾನಿಗಳಾದ ಪ್ಲೇಟೋ ಮತ್ತು ಅರಿಸ್ಟಾಟಲ್ ಅವರ ತಾತ್ವಿಕ ಕೊಡುಗೆಗಳು ಅತ್ಯಂತ ಮಹತ್ವದ ಮೈಲಿಗಲ್ಲುಗಳಾಗಿವೆ. ಈ ವಿಸ್ತೃತ ಸಂಶೋಧನಾ ಲೇಖನವು ಪ್ರಾಚೀನ ಗ್ರೀಕ್ ನಗರ ರಾಜ್ಯಗಳ ಕಾಲಘಟ್ಟದಲ್ಲಿ ರೂಪುಗೊಂಡ ಈ ಉಭಯ ದಾರ್ಶನಿಕರ ರಾಜಕೀಯ ಸಿದ್ಧಾಂತಗಳು ಇಂದಿನ ಆಧುನಿಕ ರಾಷ್ಟ್ರ ರಾಜ್ಯಗಳ ಸಂಕೀರ್ಣ ಆಡಳಿತಾತ್ಮಕ ವ್ಯವಸ್ಥೆಗಳಲ್ಲಿ ಮತ್ತು ಜಾಗತಿಕ ರಾಜಕಾರಣದಲ್ಲಿ ಹೇಗೆ ಪ್ರಸ್ತುತವಾಗಿವೆ ಎಂಬುದನ್ನು ಆಳವಾಗಿ ವಿಶ್ಲೇಷಿಸುತ್ತದೆ. ಪ್ಲೇಟೋನ ನ್ಯಾಯ ಸಿದ್ಧಾಂತ, ಆದರ್ಶ ರಾಜ್ಯದ ಕಲ್ಪನೆ ಮತ್ತು ತತ್ವಜ್ಞಾನಿ ದೊರೆಯ ಪರಿಕಲ್ಪನೆಗಳು ಆಡಳಿತದಲ್ಲಿ ಅತೀವ ನೈತಿಕತೆ, ನಿಸ್ವಾರ್ಥತೆ ಮತ್ತು ಜ್ಞಾನದ ಅನಿವಾರ್ಯತೆಯನ್ನು ಬಲವಾಗಿ ಪ್ರತಿಪಾದಿಸುತ್ತವೆ. ರಾಜಕೀಯ ವ್ಯವಸ್ಥೆಯು ಕೇವಲ ಅಧಿಕಾರದ ಚಲಾವಣೆಯ ಸಾಧನವಾಗದೆ, ಮಾನವನ ಆತ್ಮದ ಉನ್ನತಿಯನ್ನು ಸಾಧಿಸುವ ವೇದಿಕೆಯಾಗಬೇಕು ಎಂಬುದು ಆತನ ಮೂಲ ಉದ್ದೇಶವಾಗಿತ್ತು. ಮತ್ತೊಂದೆಡೆ, ರಾಜಕೀಯ ವಿಜ್ಞಾನದ ಪಿತಾಮಹನೆಂದು ಕರೆಯಲ್ಪಡುವ ಅರಿಸ್ಟಾಟಲ್, ರಾಜ್ಯವನ್ನು ಮಾನವನ ಸಾಮಾಜಿಕ ವಿಕಾಸದ ಒಂದು ಸ್ವಾಭಾವಿಕ ಮತ್ತು ನೈಸರ್ಗಿಕ ಸಂಸ್ಥೆಯನ್ನಾಗಿ ಗುರುತಿಸಿ, ಸಂವಿಧಾನಗಳ ವಾಸ್ತವಿಕ ವರ್ಗೀಕರಣ ಮತ್ತು ಕಾನೂನಿನ ಮೇಲಿನ ಆಡಳಿತವನ್ನು ದೃಢವಾಗಿ ಬೆಂಬಲಿಸುತ್ತಾನೆ. ಪ್ರಾಚೀನ ಗ್ರೀಕ್ ನಗರ ರಾಜ್ಯಗಳು ಭೌಗೋಳಿಕವಾಗಿ ಅತ್ಯಂತ ಚಿಕ್ಕದಾಗಿದ್ದರೂ ಮತ್ತು ನೇರ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿದ್ದರೂ, ಅಲ್ಲಿ ಮೊಳಕೆಯೊಡೆದ ರಾಜಕೀಯ ತತ್ವಗಳು ಇಂದಿನ ವಿಶಾಲವಾದ, ಬಹುಸಂಸ್ಕøತಿಯ ಮತ್ತು ಪ್ರಾತಿನಿಧಿಕ ರಾಷ್ಟ್ರ ರಾಜ್ಯಗಳ ಸನ್ನಿವೇಶದಲ್ಲಿಯೂ ತಮ್ಮ ಶಾಶ್ವತ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಪ್ರಸ್ತುತ ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಗಳು ಎದುರಿಸುತ್ತಿರುವ ಭ್ರμÁ್ಟಚಾರ, ಅಧಿಕಾರದ ದುರ್ಬಳಕೆ, ಆರ್ಥಿಕ ಅಸಮಾನತೆ ಮತ್ತು ನೈತಿಕತೆಯ ಕುಸಿತದಂತಹ ಜ್ವಲಂತ ಸಮಸ್ಯೆಗಳಿಗೆ ಈ ಇಬ್ಬರು ಗ್ರೀಕ್ ಚಿಂತಕರ ತತ್ವಗಳಲ್ಲಿ ಪರಿಣಾಮಕಾರಿ ಪರಿಹಾರಗಳನ್ನು ಹುಡುಕಬಹುದಾಗಿದೆ. ಅರಿಸ್ಟಾಟಲ್ ಪ್ರತಿಪಾದಿಸಿದ ಮಧ್ಯಮ ವರ್ಗದ ಪ್ರಾಮುಖ್ಯತೆ ಮತ್ತು ಅಲಿಖಿತ ಅಥವಾ ಲಿಖಿತ ಕಾನೂನಿನ ಆಡಳಿತವು ಇಂದಿನ ಎಲ್ಲಾ ಸಾಂವಿಧಾನಿಕ ಪ್ರಜಾಪ್ರಭುತ್ವಗಳಿಗೆ ಭದ್ರ ಬುನಾದಿಯಾಗಿದೆ. ಹಾಗೆಯೇ ಪ್ಲೇಟೋನ ಕಟ್ಟುನಿಟ್ಟಾದ ಶಿಕ್ಷಣ ವ್ಯವಸ್ಥೆ ಮತ್ತು ಆಡಳಿತಗಾರರ ನೈತಿಕ ತಳಹದಿಯ ವಿಚಾರಗಳು ಆಧುನಿಕ ಆಡಳಿತ ಯಂತ್ರದ ದಕ್ಷತೆಯನ್ನು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಸಾರ್ವಕಾಲಿಕ ಮಾರ್ಗದರ್ಶಕವಾಗಿವೆ. ಒಟ್ಟಾರೆಯಾಗಿ ಹೇಳುವುದಾದರೆ, ಕಾಲಾನಂತರದಲ್ಲಿ ಆಡಳಿತದ ಸ್ವರೂಪ, ಜನಸಂಖ್ಯೆ ಮತ್ತು ಭೌಗೋಳಿಕ ಗಾತ್ರ ಎμÉ್ಟೀ ಬದಲಾಗಿದ್ದರೂ, ರಾಜ್ಯದ ಮೂಲ ಉದ್ದೇಶವಾದ ಸಾರ್ವಜನಿಕ ಕಲ್ಯಾಣ ಮತ್ತು ಸಮಾಜದಲ್ಲಿ ಸತ್ಯ ಹಾಗೂ ನ್ಯಾಯದ ಸ್ಥಾಪನೆಯ ಕುರಿತಾದ ಪ್ಲೇಟೋ ಮತ್ತು ಅರಿಸ್ಟಾಟಲ್ ಅವರ ವಿಚಾರಧಾರೆಗಳು ಸಾರ್ವಕಾಲಿಕ ಸತ್ಯಗಳಾಗಿ ಮುಂದುವರೆದಿವೆ ಎಂಬುದನ್ನು ಈ ವಿಸ್ತೃತ ಅಧ್ಯಯನವು ಸಾಬೀತುಪಡಿಸುತ್ತದೆ.