Research indexJournal article
ಬದಧಧಮಮದ ಇತಹಸ ಮತತ ಸಸಕøತಕ ಪರಪರ ಕರತ ವಮರಶತಮಕ ವಶಲಷಣ
.
International Journal of Kannada Research1 Jan 2025Open access
NobleIDark:/48914/w1/20261105/F0D173B8DOI10.22271/24545813.2025.v11.i4b.1220
ಬದಧಧಮಮದ ಇತಹಸ ಮತತ ಸಸಕøತಕ ಪರಪರ ಕರತ ವಮರಶತಮಕ ವಶಲಷಣ
. · International Journal of Kannada Research · 2025
NobleIDark:/48914/w1/20261105/F0D173B8DOI10.22271/24545813.2025.v11.i4b.1220
Abstract
ಬೌದ್ಧಧಮ್ಮದ ಇತಿಹಾಸವು ಕ್ರಿ.ಪೂ. 6ನೆಯ ಶತಮಾನದಲ್ಲಿ ಮಹಾಗುರು ಬುದ್ಧ ಅವರ ಉದಾತ್ತ ಸದ್ಗುಣ ಬೋಧನೆಗಳಿಂದ ಆರಂಭವಾಗಿ ಭಾರತೀಯ ಉಪಖಂಡದಲ್ಲೇ ಅಲ್ಲದೆ ಏμÁ್ಯದ ಹಲವಾರು ಭಾಗಗಳಿಗೆ ವಿಸ್ತರಿಸಿದೆ. ಬೌದ್ಧಧಮ್ಮವು ಪ್ರಜ್ಞಾ, ಶೀಲಾ, ಸಮಾಧಿ, ಸಮಾನತೆ, ಅಹಿಂಸೆ, ಮಧ್ಯಮ ಮಾರ್ಗದ ಮೇಲೆ ಹೆಚ್ಚು ಆಧಾರಿತವಾಗಿದ್ದು, ಸಮಾಜೋ-ಸಾಂಸ್ಕøತಿಕ ಪರಿವರ್ತನೆಗೆ ಮಹತ್ತರ ಕೊಡುಗೆ ನೀಡಿರುತ್ತದೆ. ಧಾರ್ಮಿಕ ಆಚರಣೆಗಳ ದೃಷ್ಟಿಯಿಂದ ಬೌದ್ಧರು ಧ್ಯಾನ, ಪೂಜೆ, ಶೀಲಾಚರಣೆ, ಧಮ್ಮೋಪದೇಶಗಳನ್ನು ಪಾಲಿಸುವ ಮೂಲಕ ಆತ್ಮಿಕ ಶ್ರೇಯಸ್ಸನ್ನು ಸಾಧಿಸಲು ಪ್ರಯತ್ನಿಸುತ್ತಾರೆ. ಸಂಘದ ವ್ಯವಸ್ಥೆಯು ಬೌದ್ಧಧಮ್ಮದ ಪ್ರಮುಖ ಅಂಶವಾಗಿದ್ದು, ಇದು ಧಾರ್ಮಿಕ ಶಿಸ್ತಿನ ಜೊತೆಗೆ ಜ್ಞಾನ ಪ್ರಸಾರಕ್ಕೂ ಸಹಕಾರಿಯಾಗಿದೆ. ಬೌದ್ಧ ಸಾಂಸ್ಕøತಿಕ ಪರಂಪರೆಯಲ್ಲಿ ಶಾಸನಗಳು, ಸ್ತೂಪಗಳು, ಚೈತ್ಯಗಳು ಮತ್ತು ವಿಹಾರಗಳು ಪ್ರಮುಖ ಪಾತ್ರವಹಿಸುತ್ತವೆ. ಬೌದ್ಧಧಮ್ಮದ ವಿಸ್ತರಣೆ ಮತ್ತು ರಾಜಕೀಯ ಆಶ್ರಯವನ್ನು ತಿಳಿಯಲು ಪ್ರಮುಖ ಮೂಲಗಳಾಗಿವೆ. ವಿಶೇಷವಾಗಿ ಅಶೋಕ ಮಹಾರಾಜ ಅವರ ಶಾಸನಗಳು ಧಮ್ಮದ ಪ್ರಸಾರವನ್ನು ಸ್ಪಷ್ಟಪಡಿಸುತ್ತವೆ. ಗುರು ಬುದ್ಧರ ಧಾತುಗಳು ಮತ್ತು ಸ್ಮರಣೆಗಾಗಿ ನಿರ್ಮಿಸಲಾದ ಸ್ತೂಪಗಳು ಭಕ್ತಿಯ ಕೇಂದ್ರಗಳಾಗಿವೆ. ಸಾರನಾಥದಲ್ಲಿನ ಸಾಂಚಿ ಸ್ತೂಪವೂ ಬೌದ್ಧ ವಾಸ್ತುಶಿಲ್ಪದ ಅತ್ಯುತ್ತಮ ಮಾದರಿಯಾಗಿದೆ. ಚೈತ್ಯಗಳು ಪ್ರಾರ್ಥನಾ ಮಂದಿರಗಳಾಗಿ ಬಳಸಲ್ಪಟ್ಟ ಇವುಗಳು ಬೌದ್ಧ ಧ್ಯಾನ ಮತ್ತು ಪೂಜಾ ವಿಧಾನಗಳಲ್ಲಿ ಪ್ರಮುಖ ಸ್ಥಾನ ಹೊಂದಿವೆ. ಭಿಕ್ಷುಗಳ ವಾಸಸ್ಥಾನಗಳಾಗಿ ಕಾರ್ಯನಿರ್ವಹಿಸಿದ ವಿಹಾರಗಳು ಶಿಕ್ಷಣ ಮತ್ತು ಧಾರ್ಮಿಕ ಚಟುವಟಿಕೆಗಳ ಕೇಂದ್ರಗಳಾಗಿವೆ.