Research indexJournal article
ಶಬದಮಣದರಪಣ ಮತತ ಭಷ ಹಕಕಗಳ ನಲಕನಯ ತಲಮರನ ಸಸಕತಕ ಆಯಮ:
ನವಲಗುಂದ
ಕ್ರಿಸ್ತು ಜಯಂತಿ ಕನ್ನಡ ಸಂಶೋಧನಾ ಪತ್ರಿಕೆ (KRISTU JAYANTI KANNADA SAMSHODHANA PATHRIKE)30 Mar 2026Open access
NobleIDark:/48914/w1/20261105/42B21C25DOI10.59176/kjksp.v5i1.2564
ಶಬದಮಣದರಪಣ ಮತತ ಭಷ ಹಕಕಗಳ ನಲಕನಯ ತಲಮರನ ಸಸಕತಕ ಆಯಮ:
ನವಲಗುಂದ · ಕ್ರಿಸ್ತು ಜಯಂತಿ ಕನ್ನಡ ಸಂಶೋಧನಾ ಪತ್ರಿಕೆ (KRISTU JAYANTI KANNADA SAMSHODHANA PATHRIKE) · 2026
NobleIDark:/48914/w1/20261105/42B21C25DOI10.59176/kjksp.v5i1.2564
Abstract
ಪ್ರಸ್ತುತ ಲೇಖನವು ಹಳಗನ್ನಡದ ವ್ಯಾಕರಣ ಗ್ರಂಥಗಳು, ವಿಶೇಷವಾಗಿ ಕೇಶಿರಾಜನು ಕ್ರಿ.ಶ. 1260ರಲ್ಲಿ ರಚಿಸಿದ ಶಬ್ದಮಣಿದರ್ಪಣವು, ಕೇವಲ ಭಾಷಾ ನಿಯಮಗಳ ವಿವರಣೆಗಳಾಗಿರದೆ, ಕನ್ನಡ ಭಾಷಾ ಸಮುದಾಯದ ಸಾಂಸ್ಕೃತಿಕ ಸ್ವ-ನಿರ್ಧಾರ ಮತ್ತು ಭಾಷಾ ಹಕ್ಕುಗಳನ್ನು ಸ್ಥಾಪಿಸುವ ಮತ್ತು ಸಂರಕ್ಷಿಸುವ ಮೂಲಭೂತ `ಸಾಂಸ್ಕೃತಿಕ ಶಾಸನ'ವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರತಿಪಾದಿಸುತ್ತದೆ. ಮಾನವ ಹಕ್ಕುಗಳ ಉದಯೋನ್ಮುಖ ನಾಲ್ಕನೆಯ ತಲೆಮಾರಿನ ಸಾಂಸ್ಕೃತಿಕ ಆಯಾಮಕ್ಕೆ ಹೊಸ ಒಳನೋಟವನ್ನು ನೀಡಲು ಲೇಖನವು ಈ ಪ್ರಾಚೀನ ಗ್ರಂಥಗಳ ಪಾತ್ರವನ್ನು ವಿಶ್ಲೇಷಿಸುತ್ತದೆ. ನಾಲ್ಕನೆಯ ತಲೆಮಾರಿನ ಹಕ್ಕುಗಳು ಡಿಜಿಟಲ್ ಪ್ರವೇಶ, ಡಿಜಿಟಲ್ ಸ್ವ-ನಿರ್ಧಾರ ಮತ್ತು ದತ್ತಾಂಶ ನಿಯಂತ್ರಣದಂತಹ (ಹೇಬಿಯಸ್ ಡೇಟಾ) ತಾಂತ್ರಿಕ ಹಕ್ಕುಗಳ ಮೇಲೆ ಕೇಂದ್ರೀಕರಿಸುತ್ತವೆ. ಈ ಸೈದ್ಧಾಂತಿಕ ಚೌಕಟ್ಟನ್ನು ವಿಸ್ತರಿಸಿದ ಲೇಖನವು, ನಾಲ್ಕನೆಯ ತಲೆಮಾರಿನ ಹಕ್ಕುಗಳಲ್ಲಿ `ಭಾಷಾ ಭದ್ರತೆ' ಮತ್ತು `ಸಾಂಸ್ಕೃತಿಕ ದತ್ತಾಂಶ ಸಾರ್ವಭೌಮತ್ವ'ದಂತಹ ಸಾಂಸ್ಕೃತಿಕ ಅಂಶಗಳನ್ನು ಅಳವಡಿಸುವುದು ಅಗತ್ಯ ಎಂದು ವಾದಿಸುತ್ತದೆ. ಶಬ್ದಮಣಿದರ್ಪಣವು ತನ್ನ ದಾರ್ಶನಿಕ ನಿಲುವಿನಿಂದ(`ವ್ಯಾಕರಣದಿಂದ ಮೋಕ್ಷದವರೆಗೆ') ಕನ್ನಡಕ್ಕೆ ಅಚಲವಾದ ಬೌದ್ಧಿಕ ಸ್ಥಾನಮಾನವನ್ನು ಮತ್ತು ಸಾರ್ವಭೌಮತ್ವವನ್ನು ಒದಗಿಸಿತು. ಅಲ್ಲದೆ, ಪಂಪ ಮತ್ತು ಪೊನ್ನ ಸೇರಿದಂತೆ ಸುಮಾರು ಇಪ್ಪತ್ತು ಕವಿಗಳನ್ನು ಉಲ್ಲೇಖಿಸಿ, ಮೂರು ಶತಮಾನಗಳ ಸುಸ್ಥಾಪಿತ ಸಾಹಿತ್ಯಕ ಪರಂಪರೆಯಲ್ಲಿ ತನ್ನ ನಿಯಮಗಳನ್ನು ಆಧಾರಗೊಳಿಸುವ ಮೂಲಕ ಕನ್ನಡದ ಐತಿಹಾಸಿಕ ನಿರಂತರತೆಯನ್ನು ದೃಢೀಕರಿಸಿತು. ಈ ಸಂಹಿತೀಕರಣವು ಕನ್ನಡಕ್ಕೆ ೨೦೦೮ರಲ್ಲಿ ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆಯಲು ನಿರ್ಣಾಯಕ ಪುರಾವೆಯಾಯಿತು. ಡಿಜಿಟಲ್ ಯುಗದಲ್ಲಿ, ಶಬ್ದಮಣಿದರ್ಪಣವು ಹಳಗನ್ನಡದ ರೂಪವಿಜ್ಞಾನ, ಧ್ವನಿರೂಪ ಮತ್ತು ಪದಕೋಶವನ್ನು ವೈಜ್ಞಾನಿಕವಾಗಿ ನಿರೂಪಿಸುವುದರಿಂದ, ಡಿಜಿಟಲ್ ಪಠ್ಯಗಳನ್ನು ವರ್ಗೀಕರಿಸಲು, ಟ್ಯಾಗ್ ಮಾಡಲು ಮತ್ತು ವಿಶ್ಲೇಷಣಾತ್ಮಕ ಭಾಷಾ ಗ್ರಂಥ ಸಂಗ್ರಹವನ್ನು(Corpus) ನಿರ್ಮಿಸಲು ಅಗತ್ಯವಾದ ರಚನಾತ್ಮಕ ನಕ್ಷೆ ಅಥವಾ ಪರಿದತ್ತಾಂಶ(Metadata) ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ. ಈ ಮೂಲಭೂತ ರಚನೆಯಿಲ್ಲದೆ, `ಭಾಷಾ ಡಿಜಿಟಲ್ ಸಾರ್ವಭೌಮತ್ವ'ವನ್ನು ರಕ್ಷಿಸುವುದು ಅಸಾಧ್ಯವಾಗುತ್ತಿತ್ತು. ಹೀಗಾಗಿ, ಈ ಗ್ರಂಥವು ಮೂರನೆಯ ತಲೆಮಾರಿನ ಸಾಮರಸ್ಯದ ಹಕ್ಕುಗಳು ಮತ್ತು ನಾಲ್ಕನೆಯ ತಲೆಮಾರಿನ ತಾಂತ್ರಿಕ ಹಕ್ಕುಗಳ ನಡುವೆ ಸಾಂಸ್ಕೃತಿಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ.