Research indexJournal article
ಹಸಗನನಡ ಕವಯಕಕ ಹದರಬದ ಕರನಟಕದ ಕಡಗ
ದೇವಋಷಿ
ಕ್ರಿಸ್ತು ಜಯಂತಿ ಕನ್ನಡ ಸಂಶೋಧನಾ ಪತ್ರಿಕೆ (KRISTU JAYANTI KANNADA SAMSHODHANA PATHRIKE)30 Mar 2026Open access
NobleIDark:/48914/w1/20261105/8343E93BDOI10.59176/kjksp.v5i1.2558
ಹಸಗನನಡ ಕವಯಕಕ ಹದರಬದ ಕರನಟಕದ ಕಡಗ
ದೇವಋಷಿ · ಕ್ರಿಸ್ತು ಜಯಂತಿ ಕನ್ನಡ ಸಂಶೋಧನಾ ಪತ್ರಿಕೆ (KRISTU JAYANTI KANNADA SAMSHODHANA PATHRIKE) · 2026
NobleIDark:/48914/w1/20261105/8343E93BDOI10.59176/kjksp.v5i1.2558
Abstract
ಕರ್ನಾಟಕ ರಾಜ್ಯವನ್ನು ಹಳೆ ಮೈಸೂರು ಪ್ರಾಂತ, ಮದ್ರಾಸು ಪ್ರಾಂತ, ಮುಂಬೈ ಕರ್ನಾಟಕ ಪ್ರಾಂತ, ಹೈದರಾಬಾದ ಕರ್ನಾಟಕ ಪ್ರಾಂತ ಮುಂತಾದ ವಿಭಾಗಗಳನ್ನಾಗಿ ವಿಂಗಡಿಸಲಾಗುತ್ತದೆ. ಹೈದರಾಬಾದ ಕರ್ನಾಟಕ ಬೀದರ, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳನ್ನು ಒಳಗೊಂಡ ಪ್ರದೇಶ. ಭೌಗೋಳಿಕ ಹಿನ್ನಲೆಯಲ್ಲಿ ಹೈದರಾಬಾದ ಕರ್ನಾಟಕವನ್ನು ಸಗರನಾಡು, ಧರಿನಾಡು, ಕಲ್ಯಾಣನಾಡು ಎಂದು ವಿಭಾಗಿಸಲಾಗುತ್ತದೆ. “ಹೈದರಾಬಾದ ಕರ್ನಾಟಕದ ಭೌಗೋಳಿಕ ಚೌಕಟ್ಟನ್ನು ನೋಡಿದಾಗ ಈ ಪ್ರದೇಶದಲ್ಲಿ ಬೀದರ, ಕಲಬುರ್ಗಿ, ರಾಯಚೂರು, ಹಾಗು ಕೊಪ್ಪಳ ಜಿಲ್ಲೆಗಳು ಬರುತ್ತವೆ. ಬಳ್ಳಾರಿಯನ್ನು ರಾಜಕೀಯವಾಗಿ ಈ ಭಾಗದಲ್ಲಿ ಸೇರಿಸಿಕೊಳ್ಳಲಾಗುತ್ತದೆ, ವಿನಃ ಸಾಂಸ್ಕೃತಿಕವಾಗಿ ಅಲ್ಲ. ಈ ಪ್ರದೇಶವು ರಾಜಕೀಯವಾಗಿ, ಧಾರ್ಮಿಕವಾಗಿ ಅಲ್ಲೋಲ ಕಲ್ಲೋಲಗೊಳ್ಳುತ್ತ ಬಂದುದ್ದಾಗಿದೆ. ಇಲ್ಲಿಯ ಜನ ಆಳುವ ವರ್ಗದ ದಬ್ಬಾಳಿಕೆಗೆ, ಕೌರ್ಯಕ್ಕೆ ಈಡಾಗುತ್ತಲೇ ಬಂದಿದ್ದಾರೆ. ನಿಜಾಮನ ಗುಲಾಮಗಿರಿಯ ಮುಸುಕಿನಲ್ಲಿ ಇಲ್ಲಿಯ ಜನ ನರಳುತ್ತಿದ್ದರು. ಅದರೊಂದಿಗೆ ಧರ್ಮ, ಭಾಷೆ, ರಾಜಕೀಯ, ಸಾಮಾಜಿಕವಾಗಿ ಬೇರೆ ಆಯಾಮಗಳು ಈ ಭಾಗವನ್ನು ತನ್ನ ತೆಕ್ಕೆಗೆಳೆದುಕೊಂಡಿವೆ. ಇಲ್ಲಿಯ ಸಂಸ್ಕೃತಿಯು ಒಂದು ಅನ್ಯಸಂಕರ ಸಂಸ್ಕೃತಿಯಾಗಿ ಬೆಳೆದು ಬಂದಿರುವುದನ್ನು ಗಮನಿಸಬಹುದು” ಈ ಪ್ರದೇಶ `ಬೆಂಕಿಯಲ್ಲಿ ಬೆಂದ ಬಂಗಾರವಾಗಿದೆ’ ಅಂದರೆ ಈ ಪ್ರದೇಶ ಮೊದಲಿನಿಂದಲೂ ಅನೇಕ ತೊಂದರೆಗಳಿಗೆ ಒಳಗಾಗುತ್ತ, ಆ ತೊಂದರೆಗಳ ವಿರುದ್ಧ ಹೊರಾಡುತ್ತ ಬಂದು; ಇಂದು ಶ್ರೀಮಂತ ಸಂಸ್ಕೃತಿ, ಸಾಹಿತ್ಯ, ಕಲೆಗಳನ್ನು ಹೊಂದಿ ಕಲಾ ಸಮೃದ್ಧ ನಾಡು ಆಗಿದೆ.