NobleBlocks

Research indexJournal article

ಪರತಭನವತ ಲಖಕ ಮಲತ ಪಟಟಣಶಟಟ

ಛಬ್ಬಿ

ಕ್ರಿಸ್ತು ಜಯಂತಿ ಕನ್ನಡ ಸಂಶೋಧನಾ ಪತ್ರಿಕೆ (KRISTU JAYANTI KANNADA SAMSHODHANA PATHRIKE)30 Mar 2026Open access

NobleIDark:/48914/w1/20261105/CD54DE46DOI10.59176/kjksp.v5i1.2562

Abstract

ಸಾಹಿತ್ಯಲೋಕದಲ್ಲಿ ಕವಯಿತ್ರಿ ಎಂದೇ ಗುರುತಿಸಿಕೊಳ್ಳುವ ಮಾಲತಿ ಪಟ್ಟಣಶೆಟ್ಟಿ ಅವರ ಬದುಕಿನ ಚಿತ್ರಣವನ್ನು ಈ ಲೇಖನದಲ್ಲಿ ಪರಿಚಯಿಸಲಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ಮಲತಾಯಿಯ ಆಶ್ರಯದಲ್ಲಿ ಬೆಳೆಯುತ್ತಾರೆ. ಕಷ್ಟಪಟ್ಟು ಓದಿ ಉಪನ್ಯಾಸಕ ವೃತ್ತಿಯನ್ನು ಆಯ್ದುಕೊಳ್ಳುತ್ತಾರೆ. ಪ್ರೀತಿ ತೋರುತ್ತಿದ್ದ ಅಜ್ಜಿ ಮತ್ತು ತಂದೆ ಒಬ್ಬರ ನಂತರ ಒಬ್ಬರು ಮರಣ ಹೊಂದಿದಾಗ ಅವರ ಅಂತಃಕರಣ ಲೋಕವೇ ದೂರವಾಗುತ್ತದೆ. ಆ ಕತ್ತಲೆಯಲ್ಲಿ ಬೆಳಕಾಗಿ ಬಂದವರು ಅವರ ಬಾಲ್ಯದ ಸ್ನೇಹಿತ ಮಾಲತಿ ಅವರನ್ನು ವಿವಾಹವಾಗಿ ಬದುಕು ನೀಡುತ್ತಾನೆ. ಚಿಕ್ಕ ವಯಸ್ಸಿನಿಂದ ಕಷ್ಟದಲ್ಲೇ ಜೀವನ ಕಳೆದ ಅವರು ಮದುವೆಯ ನಂತರ ಸುಖವಾಗಿ ಬಾಳಬೇಕೆಂದು ಕನಸು ಕಟ್ಟಿರುತ್ತಾರೆ. ಆದರೆ ಎರಡು ಮಕ್ಕಳು ಜನಿಸುವ ವೇಳೆಗೆ ಅವರ ಪತಿ ಇವರಿಂದ ದೂರವಾಗಿ ಮತ್ತೊಂದು ಮದುವೆಯಾಗಿದ್ದು ಅವರ ಬಾಳಿಗೆ ದುರಂತವಾಗಿ ಪರಿಣಮಿಸುತ್ತದೆ. ತಮ್ಮ ಜೀವನದ ಕಥೆಯನ್ನು ಯಾರಿಗಾದರೂ ಹೇಳಿದರೆ ಅಪಮಾನವಲ್ಲವೇ?, ಅವಮಾನವಲ್ಲವೇ? ಎಂದು ಕೊರಗಿ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಜೀವವೇ ಬೇಡವೆನಿಸಿದಾಗ ಮಕ್ಕಳಿಗಾಗಿ ಬದುಕುತ್ತಾರೆ. ಇವುಗಳ ಮಧ್ಯೆ ಅವರಿಗೆ ಸಂತೃಪ್ತಿಯನ್ನು ನೀಡಿದ್ದು ಅಧ್ಯಾಪನ ವೃತ್ತಿಯೊಂದೆ. ತಮ್ಮ ನೋವುಗಳನ್ನು ಹೇಗೆ ಕಳೆದುಕೊಳ್ಳಬೇಕು ಎನ್ನುವಾಗ ಕವನಗಳು ಅವರ ನೋವನ್ನು ಮರೆಮಾಚಿಸುತ್ತವೆ. ತಮ್ಮ ನೋವನ್ನು ಹೊರಹಾಕಲು ಅವರು ಬರವಣಿಗೆಯನ್ನು ಒಂದು ಮಾಧ್ಯಮವನ್ನಾಗಿ ಆಯ್ದುಕೊಳ್ಳುತ್ತಾರೆ. ಮೊದಲು ಕವನಗಳನ್ನು ಬರೆಯಲು ಪ್ರಾರಂಭಿಸಿದ ಅವರು ನಂತರ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರವಣಿಗೆ ಪ್ರಾರಂಭಿಸಿ ಯಶಸ್ವಿಯಾಗುತ್ತಾರೆ. ಜೊತೆಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸದಸ್ಯೆಯಾಗಿ, ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಾಲತಿ ಅವರ ಸಾಹಿತ್ಯಕ್ಕೆ ಮೆಚ್ಚಿ ಅವರ ಅಭಿಮಾನಿಗಳು ‘ಮಂದಾರ’ ಅಭಿನಂದನಾ ಗ್ರಂಥವನ್ನು ಅರ್ಪಿಸಿದ್ದಾರೆ. ಹೀಗೆ ಅವರು ಬಾಲ್ಯಜೀವನದಲ್ಲಿ ಕಂಡ ಸಿಹಿ-ಕಹಿ ಅನುಭವಗಳು, ಶಿಕ್ಷಣ ಪಡೆಯುವಾಗ ಎದುರಾದ ಸಮಸ್ಯೆಗಳು, ದಾಂಪತ್ಯ ಜೀವನದಲ್ಲಿ ಅನುಭವಿಸಿದ ಘಟನೆಗಳು, ಯಾವುದಕ್ಕೂ ಕುಗ್ಗದೆ ಅವುಗಳನ್ನೇ ಸವಾಲಾಗಿ ಸ್ವೀಕರಿಸಿ ಬೆಳೆದುಬಂದ ರೀತಿ, ಸಾಹಿತ್ಯ ರಚಿಸಲು ಅವರಿಗೆ ಪ್ರೇರಣೆ ಮತ್ತು ಪ್ರಭಾವ ಬೀರಿದ ವ್ಯಕ್ತಿಗಳು ಹಾಗೂ ಅಂಶಗಳು, ಸಾಹಿತ್ಯಲೋಕಕ್ಕೆ ಅವರು ನೀಡಿದ ಕೊಡುಗೆಗಳು, ಅವರಿಗೆ ಸಂದ ಪ್ರಶಸ್ತಿ-ಸನ್ಮಾನಗಳು ಹೀಗೆ ನೊಂದವರ ಬದುಕಿಗೆ ಮಾದರಿಯಾದ ಅವರ ಬದುಕು ಮತ್ತು ಬರಹದ ಕುರಿತ ಮಾಹಿತಿಯನ್ನು ಸಂಕ್ಷಿಪ್ತವಾಗಿ ಈ ಲೇಖನದಲ್ಲಿ ವಿವರಿಸಲಾಗಿದೆ.

Discussion

More

Suggest a correction or report