Research indexJournal article
‘ಕವರಜಮರಗ’ ಭವಸದ ಕನನಡ ಜಗತತ: ಒದ ಅವಲಕನ
ಹೆಚ್
ಕ್ರಿಸ್ತು ಜಯಂತಿ ಕನ್ನಡ ಸಂಶೋಧನಾ ಪತ್ರಿಕೆ (KRISTU JAYANTI KANNADA SAMSHODHANA PATHRIKE)30 Mar 2026Open access
NobleIDark:/48914/w1/20261105/13FE45E6DOI10.59176/kjksp.v5i1.2557
‘ಕವರಜಮರಗ’ ಭವಸದ ಕನನಡ ಜಗತತ: ಒದ ಅವಲಕನ
ಹೆಚ್ · ಕ್ರಿಸ್ತು ಜಯಂತಿ ಕನ್ನಡ ಸಂಶೋಧನಾ ಪತ್ರಿಕೆ (KRISTU JAYANTI KANNADA SAMSHODHANA PATHRIKE) · 2026
NobleIDark:/48914/w1/20261105/13FE45E6DOI10.59176/kjksp.v5i1.2557
Abstract
ಕನ್ನಡದ ಪ್ರಪ್ರಥಮ ಶಾಸನ ಎಂದಕೂಡಲೇ ‘ಹಲ್ಮಿಡಿ ಶಾಸನ’ (ಕ್ರಿ.ಶ. ೪೫೦) ಹೇಗೆ ನೆನಪಾಗುತ್ತದೋ ಹಾಗೇ, ಕನ್ನಡದ ಪ್ರಪ್ರಥಮ ಉಪಲಬ್ಧ ಕೃತಿ, ಮೊಟ್ಟಮೊದಲ ಲಕ್ಷಣ ಗ್ರಂಥ ಹಾಗೂ ಅಲಂಕಾರ ಗ್ರಂಥ ಎಂದೊಡನೆ ಶ್ರೀವಿಜಯನ ‘ಕವಿರಾಜಮಾರ್ಗ’ (ಕ್ರಿ.ಶ. ೮೫೦) ಕೃತಿ ನೆನಪಾಗುತ್ತದೆ. ಈ ಕೃತಿಯನ್ನು ಮೊಟ್ಟಮೊದಲಿಗೆ ‘ನೃಪತುಂಗದೇವವಿರಚಿತ ಕವಿರಾಜಮಾರ್ಗಂ’ ಎಂದು ೧೮೯೮ರಲ್ಲಿ ಪ್ರಕಟಿಸಿದ ಕೀರ್ತಿ ಕೆ. ಬಿ. ಪಾಠಕ್ ಅವರಿಗೆ ಸಲ್ಲುತ್ತದೆ. ನಂತರ ಎ. ವೆಂಕಟರಾವ್ ಮತ್ತು ಪಂಡಿತ ಎಚ್. ಶೇಷ ಅಯ್ಯಂಗಾರ್‌ರ-‘ಕರ್ಣಾಟಕ ಕವಿರಾಜಮಾರ್ಗಂ’, ಎಂ. ವಿ. ಸೀತಾರಾಮಯ್ಯನವರ ‘ಶ್ರೀ ವಿಜಯಕೃತ ಕವಿರಾಜಮಾರ್ಗಂ’, ಹೊಸಗನ್ನಡ ಅನುವಾದ ಸಮೇತ ಕೆ. ಕೃಷ್ಣಮೂರ್ತಿಯವರ ‘ನೃಪತುಂಗದೇವಾನುಮತA ಶ್ರೀವಿಜಯಪ್ರಭೂತಂ ಕವಿರಾಜಮಾರ್ಗಂ’, ಟಿ. ವಿ. ವೆಂಕಟಾಚಲಶಾಸ್ತಿçÃಯವರ ‘ಶ್ರೀವಿಜಯಪ್ರಭೂತಂ ಕವಿರಾಜಮಾರ್ಗಂ’, ಆರ‍್ವಿಯಸ್ ಸುಂದರಂರವರು ‘ಶ್ರೀವಿಜಯನ ಕವಿರಾಜಮಾರ್ಗಂ’, ಹಂಪ ನಾಗರಾಜಯ್ಯರವರು, ‘ಶ್ರೀವಿಜಯ ವಿರಚಿತ ಕವಿರಾಜಮಾರ್ಗಂ: ಹೊಸ ಶೋಧದ ಬೆಳಕಿನಲ್ಲಿ’; ಹೀಗೆ ಕವಿರಾಜಮಾರ್ಗ ಕೃತಿಯ ಅನೇಕ ಸಂಪಾದನೆಗಳು ಪ್ರಕಟವಾಗಿವೆ. ಮುಳಿಯ ತಿಮ್ಮಪ್ಪಯ್ಯರವರ ‘ಕವಿರಾಜಮಾರ್ಗ ವಿವೇಕ’, ಎಂ. ವಿ. ಸೀತಾರಾಮಯ್ಯರವರ ‘ಕವಿರಾಜಮಾರ್ಗ’, ಎಂ. ಎಂ. ಕಲುಬುರ್ಗಿಯವರ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’, ಭೀಮರಾವ್ ಚಿಟಗುಪ್ಪಿರವರ ‘ಕವಿರಾಜಮಾರ್ಗ ಪ್ರಶಸ್ತಿ’, ಕೆ. ವಿ. ಸುಬ್ಬಣ್ಣರವರ ‘ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು’, ರಹಮತ್ ತರೀಕೆರೆಯವರ ಸಂಪಾದನೆಯ ‘ಕವಿರಾಜಮಾರ್ಗ: ಸಾಂಸ್ಕೃತಿಕ ಮುಖಾಮುಖಿ’ ಮೊದಲಾದ ಸಂಶೋಧನಾ ಕೃತಿಗಳು ಪ್ರಕಟವಾಗುವುದರೊಂದಿಗೆ ಅನೇಕ ಲೇಖನಗಳೂ ಪ್ರಕಟವಾಗಿವೆ. ಕವಿರಾಜಮಾರ್ಗ ಕಾಲದ ಕನ್ನಡ ಮತ್ತು ಸಂಸ್ಕೃತ ಪರಿಸರವನ್ನು ಅಧ್ಯಯನ ಮಾಡಿ, ‘ವಿಶ್ವಾತ್ಮಕ ದೇಶಭಾಷೆ’ ಎಂಬ ಪರಿಭಾಷೆಯನ್ನು ಚಲಾವಣೆಗೆ ತಂದ ಶೆಲ್ಡನ್ ಪೊಲಾಕ್ ಅವರ ಆಯ್ದ ಬರಹಗಳನ್ನು ಕೆ. ವಿ. ಅಕ್ಷರರವರು ಅನುವಾದಿಸಿ, ಅದೇ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಈ ಕೃತಿಯಲ್ಲಿ ವ್ಯಕ್ತವಾದ ಕನ್ನಡ ಭಾಷೆ, ಸಾಹಿತ್ಯ, ಪ್ರಾಚೀನ ಇತಿಹಾಸ, ಭೂಗೋಳ, ನಾಡವರ ಗುಣಶೀಲ ಸ್ವಭಾವ ಹಾಗೂ ನಾಡಿನ ಸಂಸ್ಕೃತಿಗಳನ್ನು ಕುರಿತ ಚಿಂತನೆಗಳನ್ನು ಹೊಸ ತಾತ್ವಿಕ ಆಯಾಮದ ನೆಲೆಗಳಿಂದ ಶೋಧಿಸುವ ಒಂದು ಕಿರು ಪ್ರಯತ್ನವನ್ನು ಪ್ರಸ್ತುತ ಲೇಖನದಲ್ಲಿ ಮಾಡಲಾಗುವುದು.