NobleBlocks

Research indexJournal article

ನವಯ ಸಹತಯ ವಮರಶ: ಕರತರ ಧಯನ

ಜಿ.ಆರ್.‌

ಕ್ರಿಸ್ತು ಜಯಂತಿ ಕನ್ನಡ ಸಂಶೋಧನಾ ಪತ್ರಿಕೆ (KRISTU JAYANTI KANNADA SAMSHODHANA PATHRIKE)30 Mar 2026Open access

NobleIDark:/48914/w1/20261105/C37AC93CDOI10.59176/kjksp.v5i1.2563

Abstract

ಕನ್ನಡ ಸಾಹಿತ್ಯ ವಿಮರ್ಶೆ ಅತ್ಯಂತ ಬೆಳೆ ತೆಗೆಯಲು ಆರಂಭಿಸಿದ್ದು ನವ್ಯ ಸಾಹಿತ್ಯ ವಿಮರ್ಶೆಯ ಸಂಧರ್ಭದಲ್ಲಿ. ವಸಾಹತುಶಾಹಿಯ ಕಾಲದಲ್ಲಿನ ಇಂಗ್ಲೀಷ್‌ ವಿದ್ಯಾಭ್ಯಾಸ ಕ್ರಮ ಭಾರತೀಯರಿಗೆ ಹೊಸ ಸಾಹಿತ್ಯಲೋಕವನ್ನು ಪರಿಚಯಿಸಿತು. ಅಂತೆಯೇ ವಿಮರ್ಶೆಯ ಪರಿಕಲ್ಪನೆಗಳನ್ನೂ ಪರಿಚಯಿಸಿತು. ಇಪ್ಪತ್ತನೇ ಶತಮಾನದ ಆರಂಭದಲ್ಲಿಯೇ ನವೋದಯ ಸಾಹಿತ್ಯದ ಅನೇಕ ಲೇಖಕರು ವಿಮರ್ಶೆಯ ಕಾರ್ಯದಲ್ಲಿ ತೊಡಗಿಸಿಕೊಂಡರು. ವಿಮರ್ಶೆ ಪ್ರಕಾರ ಕೂಡ ಸೃಜನಶೀಲ ಸಾಹಿತ್ಯದ ಜೊತೆ-ಜೊತೆಯಲ್ಲಿಯೇ ಸಾಗಬೇಕಾದ ಸಾಹಿತ್ಯ ಪ್ರಕಾರ ಎಂಬ ಹೊಸ ಅರಿವು ಸಾಹಿತ್ಯ ವಲಯದಲ್ಲಿ ಕಾಣಿಸಿಕೊಂಡಿತು. ಆಧುನಿಕ ಕನ್ನಡ ಸಾಹಿತ್ಯದ ಆರಂಭದ ಕಾಲದಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಸಮೃದ್ಧವಾಗಿರುವಂತೆ ಕಾಯ್ದುಕೊಳ್ಳುವ ಅಗತ್ಯತೆ ಇತ್ತು. ಇದರಿಂದಾಗಿ ವಿಮರ್ಶೆಯಲ್ಲಿ ಅತ್ಯಂತ ಮೃದುಧೋರಣೆ ಕಂಡುಬಂದಿತು. ಪ್ರೋತ್ಸಾಹಿಸುವ, ಹೊಗಳುವ, ತಿದ್ದುವ ರೀತಿಯ ವಿಮರ್ಶಾ ಕಾರ್ಯಗಳು ನಡೆಯುತ್ತಿದ್ದವು. ರಸವಿಮರ್ಶೆಗೆ ಮಹತ್ವ ನೀಡಲಾಗಿತ್ತು. ಅದು ಆ ಸಂದರ್ಭದ ತುರ್ತೂ ಆಗಿತ್ತು. ಹೀಗೆ ನವ್ಯ ಸಾಹಿತ್ಯ ವಿಮರ್ಶೆ ಕನ್ನಡದ ಮಹತ್ವದ ಲೇಖಕರನ್ನು ಅವರ ಕೃತಿಗಳ ಸಂದರ್ಭದಲ್ಲಿ ತೂಗಿ ನೋಡಲು ಪ್ರಾರಂಭಿಸಿತು. ಕುವೆಂಪು ಸೇರಿದಂತೆ ಎಲ್ಲ ಕನ್ನಡ ಸಾಹಿತ್ಯದ ಲೇಖಕರು ಕೃತಿನಿಷ್ಠ ವಿಮರ್ಶೆಯ ಸಿಹಿ-ಕಹಿಗಳನ್ನು ಅನುಭವಿಸಬೇಕಾಯಿತು. ಆ ಸಂದರ್ಭದಲ್ಲಿ ನವ್ಯ ಸಾಹಿತ್ಯ ವಿಮರ್ಶಕರ ವಿಶೇಷ ಧ್ಯಾನಕ್ಕೆ ಒಳಗಾದವರು ಶಿವರಾಮ ಕಾರಂತರು. ನವೋದಯ ಕನ್ನಡ ಸಾಹಿತ್ಯ ಸಂದರ್ಭದ ಪ್ರಾತಿನಿಧಿಕ ಲೇಖಕರಲ್ಲಿ ಒಬ್ಬರಾದ ಕಾರಂತರ ಕುರಿತು ಎಲ್ಲಾ ನವ್ಯ ವಿಮರ್ಶಕರು ಆಸಕ್ತಿ ವಹಿಸಿರುವುದನ್ನು ಗುರುತಿಸಬಹುದು. ಪ್ರಮುಖ ನವ್ಯ ಸಾಹಿತ್ಯ ವಿಮರ್ಶಕರುಗಳಾದ ಗೋಪಾಲಕೃಷ್ಣ ಅಡಿಗ, ಎಂ.ಜಿ.ಕೃಷ್ಣಮೂರ್ತಿ, ಎಚ್.ಎಂ.ಚನ್ನಯ್ಯ, ಯು.ಆರ್.ಅನಂತಮೂರ್ತಿ, ಜಿ.ಎಚ್.ನಾಯಕ, ಜಿ.ಎಸ್.ಅಮೂರ ಹೀಗೆ ಎಲ್ಲರೂ ಕಾರಂತರನ್ನು ವಿಮರ್ಶೆಗೆ ತೆಗೆದುಕೊಂಡಿರುವುದನ್ನು ಹಾಗೂ ಅವರ ಸಾಹಿತ್ಯವನ್ನು ಮೆಚ್ಚಿಕೊಂಡಿರುವುದನ್ನು ಕಾಣುತ್ತೇವೆ. ಕಾರಂತರ ಬಗ್ಗೆ ನವ್ಯ ಸಾಹಿತ್ಯ ವಿಮರ್ಶಕರು ತೋರಿದ ಈ ಆಸಕ್ತಿಗೆ ಒದಗಿಬಂದ ವಿಚಾರಗಳನ್ನು ಈ ಲೇಖನದ ಮೂಲಕ ಚರ್ಚಿಸಲು ಇಚ್ಚಿಸಲಾಗಿದೆ.

Discussion

More

Suggest a correction or report