NobleBlocks

Research indexJournal article

ಗಜಶಲಪರದದ ಆನಕಲ ತನಕ: ಶಸನಗಳ ಬಳಕನಲಲ ಇತಹಸ, ಸಸಕತ ಮತತ ಸಮಜದ ಒದ ಸಮಗರ ಅಧಯಯನ

ಜಿ

ಕ್ರಿಸ್ತು ಜಯಂತಿ ಕನ್ನಡ ಸಂಶೋಧನಾ ಪತ್ರಿಕೆ (KRISTU JAYANTI KANNADA SAMSHODHANA PATHRIKE)30 Mar 2026Open access

NobleIDark:/48914/w1/20261105/4BA1CECBDOI10.59176/kjksp.v5i1.2559

Abstract

ಕರ್ನಾಟಕದ ಇತಿಹಾಸದ ಮೂಲಾಧಾರಗಳಾದ ಶಾಸನಗಳು ಪುರಾತನ ರಾಜಕೀಯ, ಧಾರ್ಮಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಜೀವನದ ನಿಖರ ದಾಖಲೆಗಳಾಗಿವೆ. ಈ ಲೇಖನವು ಪ್ರಾಚೀನ ಗಜಶಿಲಾಪುರ (ಇಂದಿನ ಆನೇಕಲ್) ಪ್ರದೇಶದ ಶಾಸನಗಳ ಆಧಾರದ ಮೇಲೆ ಸ್ಥಳೀಯ ಆಡಳಿತ, ಧಾರ್ಮಿಕ ಸಹಿಷ್ಣುತೆ, ಜನಪದ ಸಂಸ್ಕೃತಿ ಮತ್ತು ಸಾಮಾಜಿಕ ಸಂಘಟನೆಗಳ ಸಮಗ್ರ ವಿಶ್ಲೇಷಣೆಯನ್ನು ನೀಡುತ್ತದೆ. ಆನೇಕಲ್ ತಾಲ್ಲೂಕು ಗಂಗರು, ಚೋಳರು, ಹೋಯ್ಸಳರು ಹಾಗೂ ವಿಜಯನಗರರ ಕಾಲದ ಅನೇಕ ಶಾಸನಗಳ ಮೂಲಕ ಕರ್ನಾಟಕದ ರಾಜಕೀಯ ಹಾಗೂ ಧಾರ್ಮಿಕ ಪರಿವರ್ತನೆಗಳ ಜೀವಂತ ಸಾಕ್ಷಿಯಾಗಿ ಪರಿಣಮಿಸಿದೆ. ಮಿಥಿಕ್ ಸೊಸೈಟಿ ನಡೆಸಿದ ೩ಆ ಡಿಜಿಟಲ್ ಶಾಸನ ಸಂರಕ್ಷಣಾ ಯೋಜನೆಯಂತಹ ಆಧುನಿಕ ಪ್ರಯತ್ನಗಳು ಈ ಶಾಸನ ಪರಂಪರೆಯ ಸಂರಕ್ಷಣೆಗೆ ಹೊಸ ಆಯಾಮವನ್ನು ತಂದಿವೆ. ಈ ಸಂಶೋಧನಾ ಪ್ರಬಂಧವು ಆನೇಕಲ್ ಅಥವಾ ಗಜಶಿಲಾಪುರದ ಶಾಸನಗಳನ್ನು ಕೇವಲ ಇತಿಹಾಸದ ದೃಷ್ಟಿಯಿಂದಷ್ಟೇ ಅಲ್ಲದೆ, ಪುರಾತತ್ವ, ಸಮಾಜಶಾಸ್ತ್ರ ಮತ್ತು ಧರ್ಮದ ಪರಸ್ಪರ ಸಂಬAಧಗಳ ನೈಜ ವಿಶ್ಲೇಷಣೆಯಾಗಿ ಪರಿಗಣಿಸುತ್ತದೆ.

Discussion

More

Suggest a correction or report