Research indexJournal article
ಕನನಡ ಸಹತಯದ ಮಲ ಎಡಪಥಯ ಚತನಗಳ ಪರಭವ ಹಗ ಪರರಣ
ಎನ್.ಎಸ್
ಕ್ರಿಸ್ತು ಜಯಂತಿ ಕನ್ನಡ ಸಂಶೋಧನಾ ಪತ್ರಿಕೆ (KRISTU JAYANTI KANNADA SAMSHODHANA PATHRIKE)30 Mar 2026Open access
NobleIDark:/48914/w1/20261105/2B410540DOI10.59176/kjksp.v5i1.2556
ಕನನಡ ಸಹತಯದ ಮಲ ಎಡಪಥಯ ಚತನಗಳ ಪರಭವ ಹಗ ಪರರಣ
ಎನ್.ಎಸ್ · ಕ್ರಿಸ್ತು ಜಯಂತಿ ಕನ್ನಡ ಸಂಶೋಧನಾ ಪತ್ರಿಕೆ (KRISTU JAYANTI KANNADA SAMSHODHANA PATHRIKE) · 2026
NobleIDark:/48914/w1/20261105/2B410540DOI10.59176/kjksp.v5i1.2556
Abstract
ಕನ್ನಡ ಸಾಹಿತ್ಯದ ಮೇಲೆ ಎಡಪಂಥೀಯ ಚಿಂತನೆಯ ಪ್ರಭಾವವು ಮಾರ್ಕ್ಸ್ವಾದ ಭಾರತಕ್ಕೆ ಬಂದ ಬಳಿಕ ಮಾತ್ರ ಆರಂಭವಾದದಲ್ಲ; ವಚನ ಚಳುವಳಿಯ ಸಮಾನತಾವಾದಿ, ಯುಕ್ತಿವಾದಿ ಮತ್ತು ವಿರೋಧಾತ್ಮಕ ಧೋರಣೆಗಳಲ್ಲೇ ಅದರ ಬೀಜಗಳನ್ನು ಗುರುತಿಸಬಹುದು. ಸಮಾಜದ ಅನ್ಯಾಯ, ಜಾತಿ–ವರ್ಗ ಅಸಮಾನತೆ, ದಮನ–ಶೋಷಣೆಯ ವಿರುದ್ಧದ ಕಳಕಳಿ, ಮತ್ತು ಮಾನವೀಯ ಮೌಲ್ಯಗಳ ಪ್ರತಿಪಾದನೆ- ಇವೆಲ್ಲವೂ ಕನ್ನಡ ಸಾಹಿತ್ಯವನ್ನು ಎಡಪಂಥೀಯ ದೃಷ್ಟಿಕೋನಕ್ಕೆ ಸೆಳೆದ ಶಕ್ತಿಪ್ರವೃತ್ತಿಗಳಾಗಿವೆ. ಈ ಲೇಖನವು ಮಾರ್ಕ್ಸ್ವಾದ ವಿಮರ್ಶೆಯ ತತ್ವಗಳನ್ನು ಆಧರಿಸಿ ಕನ್ನಡದ ನವ್ಯೋತ್ತರ, ಬಂಡಾಯ, ದಲಿತ ಮತ್ತು ಸಮಾಜವಾದಿ ಸಾಹಿತ್ಯದ ಬೆಳವಣಿಗೆಗೆ ಕಾರಣವಾದ ಚಿಂತನೆಗಳ ಮೂಲತತ್ವಗಳನ್ನು ವಿಶ್ಲೇಷಿಸುತ್ತದೆ. ಸಿ.ಎನ್.ರಾಮಚಂದ್ರನ್, ಜಿ.ರಾಮಕೃಷ್ಣ, ಬರಗೂರು ರಾಮಚಂದ್ರಪ್ಪ, ಡಿ.ಆರ್. ನಾಗರಾಜ್ ಮೊದಲಾದ ಚಿಂತಕರ ಅಭಿಪ್ರಾಯಗಳನ್ನು ಆಧರಿಸಿ ಸಾಹಿತ್ಯದಲ್ಲಿನ ಬದ್ಧತೆ, ತಾತ್ವಿಕ ಆಯಾಮ, ಐಡಿಯಾಲಜಿಯ ಪಾತ್ರ ಮತ್ತು ಸಾಮಾಜಿಕ ಜವಾಬ್ದಾರಿಗಳ ಪರಿವೀಕ್ಷಣೆಯನ್ನು ನಡೆಸುತ್ತದೆ. ಒಟ್ಟಿನಲ್ಲಿ, ಈ ಸಂಶೋಧನಾ ಲೇಖನವು ಕನ್ನಡ ಸಾಹಿತ್ಯದಲ್ಲಿ ಎಡಪಂಥೀಯ ಪ್ರಜ್ಞೆಯು ಜಾತ್ಯತೀತತೆ, ಸಮಾನತೆ, ಧರ್ಮನಿರಪೇಕ್ಷತೆ, ವೈಜ್ಞಾನಿಕ ಮನೋಭಾವ, ಜನಪರ ಬದ್ಧತೆ ಹಾಗೂ ಶೋಷಣೆಯ ವಿರುದ್ಧದ ಪ್ರತಿರೋಧಗಳಿಗೆ ಅಡಿಪಾಯ ಹಾಕಿ, ನವೀನ–ಸಮಾಜಮುಖಿ ಸಾಹಿತ್ಯ ಪರಂಪರೆಯನ್ನು ರೂಪಿಸಿದ ರೀತಿಯನ್ನು ಸಂಕ್ಷಿಪ್ತವಾಗಿ ನಿರೂಪಿಸುತ್ತದೆ.