NobleBlocks

Research indexJournal article

ನಮಚದರ ಅವರ ಪರವಸ ಸಹತಯದ ನಲಗಟಟ

ಶೋಭಾ

ಕ್ರಿಸ್ತು ಜಯಂತಿ ಕನ್ನಡ ಸಂಶೋಧನಾ ಪತ್ರಿಕೆ (KRISTU JAYANTI KANNADA SAMSHODHANA PATHRIKE)30 Mar 2026Open access

NobleIDark:/48914/w1/20261105/F5BA99E4DOI10.59176/kjksp.v5i1.2561

Abstract

ಕನ್ನಡ ಸಾಹಿತ್ಯ ಇಂದು ನೂತನಮಯ ಹುಡುಕಾಟದ ಮಾರ್ಗವನ್ನು ಅನುಸರಿಸುತ್ತ ಬೆಳೆಯುತ್ತಿದೆ. ಸಾಹಿತ್ಯವೆಂಬುದು ಕೇವಲ ವ್ಯಕ್ತಿ ಕೇಂದ್ರಿತವಲ್ಲ. ಬದಲಾಗಿ ಸಮುದಾಯ, ನಿಷ್ಠೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಸಮಷ್ಠಿಯ ಚಿಂತನೆಗಳನ್ನು ಒಳಗೊಂಡಿರುವುದಾಗಿದೆ. ಕನ್ನಡ ಸಾಹಿತ್ಯವು ಕಾಲ, ಸನ್ನಿವೇಶಗಳಿಗೆ ತಕ್ಕಂತೆ ಹೊಂದಿಕೊಂಡು ಬದಲಾವಣೆಗಳನ್ನು ಅರಗಿಸಿಕೊಂಡಿದೆ. ಹಾಗೆಯೇ ಜೊತೆಯಲ್ಲಿ ಸಾಕಷ್ಟು ಸಮೃದ್ಧವಾಗಿ, ಸಾಗರೋಪಾದಿಯಾಗಿ ಎಲ್ಲ ಕಡೆ ಹರಡಿಕೊಂಡಿದೆ. ಸಾಹಿತ್ಯವನ್ನು ಕುರಿತಂತೆ, “ಮಾನವನ ಜೀವನದ ಪ್ರತಿಬಿಂಬವೂ ಹೌದು, ಗತಿ ಬಿಂಬವೂ ಹೌದು”೧ ಎಂದು ಕವಿ ಜಿ.ಎಸ್. ಶಿವರುದ್ರಪ್ಪನವರ ಹೇಳಿಕೆ ಇದಕ್ಕೆ ಅನುಗುಣವಾಗಿದೆ. ಆಧುನಿಕ ಸಾಹಿತ್ಯ ಚರಿತ್ರೆಯಲ್ಲಿ ನವೋದಯ, ಪ್ರಗತಿಶೀಲ, ನವ್ಯ, ದಲಿತ , ಬಂಡಾಯ ಚಳುವಳಿಗಳೆಂಬ ಸಾಹಿತ್ಯ ಘಟ್ಟಗಳ ಜೊತೆಗೆ ಸ್ರ‍್ತೀ ಸಂವೇದನೆಗಳನ್ನು ಅದು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಆದರೆ ಎಷ್ಟೋ ಸಾಹಿತಿಗಳು ಯಾವುದೇ ನಿರ್ದಿಷ್ಟವಾದ ಸಾಹಿತ್ಯ ಪಂಥಕ್ಕೆ ಒಳಪಡದೆ ವಿಶಿಷ್ಟ, ವಿಭಿನ್ನ ನೆಲೆಯಲ್ಲಿ ಸಾಹಿತ್ಯದ ಕೃಷಿ ಮಾಡಿದ್ದಾರೆ. ಆ ಮುಖಾಂತರ ವಿಭಿನ್ನ ರೀತಿಯ ಚಿಂತನಾ ಕ್ರಮಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕಾಣಿಕೆಯಾಗಿ ನೀಡಿದ್ದಾರೆ. ಇಪ್ಪತ್ತನೇ ಶತಮಾನದ ಆರಂಭದ ಕಾಲಘಟ್ಟದಲ್ಲಿ ಎಲ್ಲ ರೀತಿಯ ಅವಕಾಶಗಳಿಂದ ವಂಚಿತರಾದ ಮಹಿಳೆಯರು ಸ್ವಾತಂತ್ರ‍್ಯ ಆಂದೋಲನದಲ್ಲಿ ಭಾಗವಹಿಸಿ ಬೆಳಕಿಗೆ ಬಂದರು. ಅನಿವಾರ್ಯತೆಯಿಂದಾಗಿ ಶಿಕ್ಷಣದ ಪ್ರಚಾರ ತುಂಬಾ ಭರದಿಂದ ನಡೆಯಿತು. ಮಹಿಳೆಯರಿಗೂ ಶಿಕ್ಷಣವೆಂಬುದು ಮೂಲಭೂತ ಹಕ್ಕಾಯಿತು.

Discussion

More

Suggest a correction or report