NobleBlocks

Research indexJournal article

ಡಾ.ಚೆನ್ನಣ್ಣ ವಾಲೀಕಾರವರ ಪ್ರವಾಸ ಕಥನ; (ಮಹಾರಾಷ್ಟ್ರ ರಾಜ್ಯದ ತುಂಬ ಹರಿಯುತ್ತಿರುವ ವೇಶ್ಯಾ ಸೋದರಿಯರ ಕಣ್ಣೀರ ಕಡಲಿನ ಕೋಗಿಲೆ ಗಾನ)

ಮಲ್ಲಯ್ಯ

12 Oct 2025Open access

NobleIDark:/48914/w1/20261105/80826FA0DOI10.5281/zenodo.23841280

Abstract

ಬಂಡಾಯ ಸಾಹಿತ್ಯ ಸಂಘಟನೆಯ ಮೂಲಕ ಕರ್ನಾಟಕದಾದ್ಯಂತ ಚಿರಪರಿತರಾದದ್ದಲ್ಲದೆ, ಬಂಡಾಯ ಸಂಘಟನೆ ಹುಟ್ಟು ಹಾಕಿದ ಪ್ರಮುಖ ಸಾಹಿತಿಗಳಲ್ಲಿ ಡಾ.ಚೆನ್ನಣ್ಣ ವಾಲೀಕಾರ ಒಬ್ಬರು. ಗುಲಬರ್ಗಾ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಶಂಕರವಾಡಿಯಲ್ಲಿ ೦೬.೦೪.೧೯೪೩ರಲ್ಲಿ ಜನಿಸಿದರು. ಕೋಲಿ ಸಮಾಜದ ಧೂಳಪ್ಪ ವಾಲೀಕಾರ ಇವರ ತಂದೆ, ತಾಯಿ ಸಾಬಮ್ಮ, ಶಹಬಾದ್, ಗುಲಬರ್ಗಾ, ಧಾರವಾಡದಲ್ಲಿ ಶಿಕ್ಷಣ ಎಂ.ಎ., ಪಿಹೆಚ್.ಡಿ. ಪದವಿಧರರು. ಶಾಲಾ ಶಿಕ್ಷಕರಾಗಿ ತದನಂತರ ರಾಯಚೂರಿನ ಹಮದರ್ದ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ, ಎಲ್.ವಿ.ಡಿ. ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಬಂಡಾಯ ಸಾಹಿತ್ಯ ಸಂಘಟನೆ ಸ್ಥಾಪನೆ ಮಾಡುವಲ್ಲಿ ಮೊದಲ ಧ್ವನಿ ಎತ್ತಿದವರು. ಧರ್ಮಸ್ಥಳದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತಗೋಷ್ಠಿ ಇರಬೇಕೆಂದು ರಾಯಚೂರಿನಿಂದ ಡಾ.ಚೆನ್ನಣ್ಣ ವಾಲೀಕರ, ಸಬರದ, ಜಂಬಣ್ಣ ಹಾಗೂ ಬೋಳಬಂಡಪ್ಪ ಅವರು ಪತ್ರ ಬರೆದರು. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿದ್ದ ಕಮಲ ಹಂಪನಾ ಅವರು ಸಾಹಿತ್ಯದಲ್ಲಿ ದಲಿತ-ಬಲಿತ-ಕಲಿತ ಎಂಬ ವರ್ಣವಿಲ್ಲ ಸಮಾನ ಅವಕಾಶ ನೀಡಲಾಗುವುದೆಂದರು. ಆಗ ಇದೇ ಆಶಯದ ಮೇರೆಗೆ ಬೆಂಗಳೂರಿನಲ್ಲಿ ಪರ್ಠ್ಯಾಯವಾಗಿ ಬಂಡಾಯ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಯಿತು. ದೇವನೂರು, ಚಂಪಾ, ಬರಗೂರು, ಸಿದ್ಧಲಿಂಗಯ್ಯ, ವಾಲೀಕಾರ್, ಬೋಳಬಂಡೆಪ್ಪ ಮುಂತಾದವರು ಭಾಗವಹಿಸಿದ್ದರು. ಆಗ ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟಲು ಕಾರಣವಾಯಿತು. ಇವರು ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸಂಶೋಧಕರಾಗಿ ಡಾ.ಚೆನ್ನಣ್ಣ ವಾಲೀಕಾರ ಹೈದರಾಬಾದ್ ಕರ್ನಾಟಕದ ಗ್ರಾಮದೇವತೆಗಳು ಕುರಿತಾಗಿ ಸಮಗ್ರ ಸಂಶೋಧನೆ ಕೈಗೊಂಡಿದ್ದಾರೆ. ಒಂದು ಗ್ರಾಮದ ಜನಾಂಗೀಯ ಅಧ್ಯಯನ, ದೇವದಾಸಿಯರ, ಸಮಗ್ರ ಸಾಮಾಜಿಕ, ಧಾರ್ಮಿಕ, ಆರ್ಥಿಕ ಅಧ್ಯಯನವನ್ನು ಕೈಗೊಂಡು ಮಹತ್ವಪೂರ್ಣವಾದ ಕೊಡುಗೆಯನ್ನು ಕೊಟ್ಟಿದ್ದಾರೆ. ೧೯೭೦ರಿಂದಲೇ ಕಾವ್ಯ ಬರೆಯಲು ಪ್ರಾರಂಭಿಸಿದರು. ಮರದಮೇಲಿನಗಾಳಿ, ಕರಿತೆಲಿ ಮಾನವನ ಜೀಪದ, ಬಂಡೆದ್ದ ದಲಿತರ ಬೀದಿ ಹಾಡುಗಳು, ಪ್ಯಾಂಥರ್ ಪದ್ಯಗಳು, ಖೈದಿಗಳ ಮಧ್ಯ ಎದ್ದ ಕಗ್ಗತ್ತಲೆಯ ಖಂಡಕಾವ್ಯ ಬಂಡಾಯದ ಹಾಗೂ ಸಮಾಜ ಮುಖಿಯಾದ ಕಾವ್ಯವನ್ನು ಕೊಟ್ಟಿದ್ದಾರೆ. ಕೆಳಸ್ತರದ ನೋವು ನಲಿವುಗಳು, ಸಮಸ್ಯೆ ಸವಾಲುಗಳು, ಪ್ರಸ್ತುತ ಸಂದರ್ಭದ ಚಿಂತನೆ ಆಲೋಚನೆಗಳನ್ನು ಕುರಿತು ವಿವರವಾಗಿ ಕಾವ್ಯದ ಮೂಲಕ ಅಭಿವ್ಯಕ್ತಿಸುವ ಕೆಲಸ ವಾಲೀಕಾರರು ಮಾಡಿದ್ದಾರೆ. ಹೀಗಾಗಿ ಅವರು ಸಮಗ್ರಕಾವ್ಯ ಹೊರತಂದಿದ್ದಾರೆ. ಅಭ್ಯಾಸ ಯೋಗ್ಯವಾದ ಕಾವ್ಯಗಳು ಅವರ ಜೀವನ ಮುಖ್ಯ ಆದರ್ಶಗಳನ್ನು ಹೊರಹಾಕಲು ಪ್ರಯತ್ನಿಸುತ್ತವೆ. ವಾಲೀಕಾರ ಚೆನ್ನಣ್ಣನ ಮುನ್ನೂರು ಮೂರು ವಚನಗಳು ಎಂಬ ವಚನಗಳ ಸಂಕಲನದಲ್ಲಿ ವೈಚಾರಿಕ ಪ್ರಜ್ಞೆ ಹಾಗೂ ಸಮಾಜಮುಖಿಯಾದ ಚಿಂತನಾಧಾರೆಗಳನ್ನು ಕಟ್ಟಿಕೊಟ್ಟಿದ್ದಾರೆ. "ಯಾವ ಅಕ್ಷರದಿಂದ ಬರೆದು ಹೇಳಲಿ ನಾನು, ನನ್ನ ಜನರಿಗಾದ ಎದೆಯ ಬ್ಯಾನಿ" ಎಂಬ ಹಾಡಿನ ಮೂಲಕ ಕರ್ನಾಟಕದ ಸತ್ವಶಾಲಿ ಕವಿಯಾಗಿ ಹೊರಬಂದಿದ್ದಾರೆ. ಪದ್ಯ ಅವರಿಗೆ ದಕ್ಕಿದೆ. ಹೀಗಾಗಿ ಲಯಾತ್ಮಕ ಜಾನಪದ ಮಟ್ಟುಗಳನ್ನು ಬಳಸಿಕೊಂಡು ಬರೆದ ಪದ್ಯ ಅತ್ಯಂತ ರೋಚಕವಾಗಿದೆ. ಕಥೆಗಾರರಾದ ವಾಲೀಕಾರರು ಗುಲಬರ್ಗಾ, ಶಾಹಬಾದ್ ಹಾಗೂ ರಾಯಚೂರು ಜಿಲ್ಲೆಗಳ ಪ್ರತಿನಿಧಿತ್ವ ಹೊತ್ತುಕೊಂಡು ಕತೆ ರಚಿಸಿದ್ದಾರೆ. ಕೆಳವರ್ಗದ ಹಾಗೂ ದಲಿತರ ಕುರಿತಾದ ಅದರಲ್ಲೂ ಹೆಣ್ಣಿನ ಅಳಲನ್ನು ತುಂಬಾ ಆಪ್ತವಾಗಿ ಚಿತ್ರಿಸುವ ಕೆಲಸ ವಾಲೀಕಾರರು ಮಾಡಿದ್ದಾರೆ. ಅವರ ಕಥೆಗಳಲ್ಲಿ ಹೊಸತನ ಎದ್ದು ಕಾಣುತ್ತದೆ. ಸಮಕಾಲೀನ ಸಂದರ್ಭಗಳ ತಾತ್ವಿಕ ಭಿನ್ನತೆ ವೈಚಾರಿಕ ಚಿಂತನೆಗಳನ್ನು ಪ್ರತಿಪಾದಿಸುವ ಕೆಲಸ ವಾಲೀಕಾರರು ಮಾಡಿದ್ದಾರೆ. ಅವರ ಕಪ್ಪು ಕಥೆಗಳು, ಹುತ್ತದಲ್ಲಿ ಕದ್ದವರು ಕಥೆಗಳು ಹಾಗೂ ಉಳಿದೆಲ್ಲ ಕಥೆಗಳನ್ನು ಸೇರಿಸಿ ಸಮಗ್ರ ಕಥೆಗಳನ್ನು ಪ್ರಕಟಿಸಿದ್ದಾರೆ. ಕಾದಂಬರಿಯ ಪ್ರಕಾರದಲ್ಲಿ ಕೃಷಿ ಕೈಗೊಂಡ ವಾಲೀಕಾರರು ಹೆಣ್ಣಿನ ಅಂತರಂಗದಲ್ಲಿ ಹೊತ್ತು ಅವಳ ಜೀವನ ಕಥೆ-ವ್ಯಥೆಗಳನ್ನು ದಾಖಲಿಸಿದ್ದಾರೆ. ಕೆಳ ಸಮುದಾಯದ ಮುಸ್ಲಿಂ-ದಲಿತ ಹಾಗೂ ಹಿಂದುಳಿದ ಮಹಿಳೆಯರ ಗಾಢ ಪ್ರಭಾವಗಳನ್ನು ಕಾದಂಬರಿಗಳಲ್ಲಿ ತಂದಿದ್ದಾರೆ. ಗ್ರಾಮೀಣ ಪ್ರದೇಶದ ಸೊಗಡು ಕೂಡ ವಿಶಿಷ್ಟವಾದ ಧ್ವನಿಯಲ್ಲಿ ಹೊರ ಹಾಕಿದ್ದಾರೆ. ಕೋಟೆ, ಬಾಗಿಲು, ವಿರದುರಿ, ಒಂದು ಹೆಣ್ಣಿನ ಒಳಜಗತ್ತು, ಹುಲಿಗೆಮ್ಮ ಹಾಗೂ ಬೆಳ್ಯ ಐದು ಕಾದಂಬರಿಗಳು ಪ್ರಕಟಗೊಂಡು ಪ್ರತಿ ಸಂಸ್ಕೃತಿಯ ನಿರ್ಮಾಣಕ್ಕೆ ಸುಕಾರತೆ ಹೊಂದಿದೆ. ಅದರ ಬೆಳ್ಳ ಕಾದಂಬರಿ ದೇವನೂರರ ಕುಸುಮಬಾಲೆಯಷ್ಟೇ ಪ್ರಭಾವಶಾಲಿಯಾದುದು. ಗುಲಬರ್ಗಾ ಶಹಬಾದ್‌ಗಳ ಪ್ರದೇಶದ ಭಾಷೆಯನ್ನು ಆಡುನುಡಿಯ ಹಾಗೇ ಚಿತ್ರಿಸಲು ಪ್ರಯತ್ನಿಸಿದ್ದನ್ನು ಸ್ಮರಿಸಬಹುದಾಗಿದೆ. ರಂಗಭೂಮಿಯ ಮೇಲೆ ಅವರ ನಟನೆಯನ್ನು ಮಾಡಿದ್ದಾರೆ. ಅಲ್ಲದೇ ನಾಟಕವನ್ನು ರಚಿಸಿದ್ದಾರೆ. ಆ ನಾಟಕದಲ್ಲಿ ಬಹು ವಿಶೇಷವಾದ ಹರಕೆಗಳನ್ನು ಅವರು ಹೊರಹಾಕಿದ್ದಾರೆ. ಟೊಂಕದ ಕೆಳಗಿನ ಜನ, ಅಗ್ನಿರಾಜ, ಜೋಗತಿ ಇಪ್ಪತ್ತಂಶಗಳು ಅಲ್ಲದೇ ಅನೇಕ ಗೀತೆ, ಬಾನುಲಿ ರೂಪಗಳನ್ನು ರಚಿಸಿದ್ದಾರೆ. ಅವುಗಳೆಲ್ಲವೂ ಪ್ರಸಿದ್ಧವಾಗಿವೆ. ಸಮಕಾಲೀನ ಸಮಸ್ಯೆಗಳನ್ನು ಇಟ್ಟುಕೊಂಡು ಜನ ಸಾಮಾನ್ಯರಿಗೆ ಅರ್ಥವಾಗುವ ಹಾಗೇ ನಾಟಕ ರಚಿಸಿದ್ದಾರೆ. ಅಲ್ಲಿ ಸಾಹಿತ್ಯದ ಹಲವು ಛಾಯೆಗಳನ್ನು ಕಟ್ಟಿಕೊಟ್ಟಿದ್ದಾರೆ. ನಾಟಕದಲ್ಲಿ ಅವರು ಪಳಗಿದ್ದಾರೆ. ಅವರು ಸಮಗ್ರ ನಾಟಕ ಸಂಪುಟ ಹೊರತಂದಿದ್ದಾರೆ. ಜಾನಪದವೆಂದರೆ ವಾಲೀಕಾರ ಎನ್ನುವಷ್ಟು ಪ್ರಸಿದ್ದರು. ಕನ್ನಡ ಕವಿಗಳಲ್ಲಿ ಬೇಂದ್ರೆ, ಕಂಬಾರ ಬಿಟ್ಟರೆ ಜಾನಪದವನ್ನು ಅಷ್ಟು ಯಶಸ್ವಿಯಾಗಿ ಪ್ರಯೋಗಾಲಯದಲ್ಲಿ ತೊಡಿಸಿಕೊಂಡವರೆಂದರೆ ವಾಲೀಕಾರರೇ ಆಗಿದ್ದಾರೆ. ಅವರು ಕಾವ್ಯ ಕಥೆ, ಕಾದಂಬರಿ, ನಾಟಕ ಏನೇ ಇರಲಿ ಅವುಗಳನ್ನೆಲ್ಲಾ ಜಾನಪದದ ಮಟ್ಟು, ಲಯ, ಭಾವ, ವಸ್ತುಗಳನ್ನು ಬಳಸಿಕೊಂಡು ಸಂಪೂರ್ಣವಾದ ಮಾಹಿತಿ ನೀಡುತ್ತಾರೆ. ಅವುಗಳನ್ನು ಸಾಂದರ್ಭೀಕವಾಗಿ ಅಷ್ಟೇ ಸಮಗ್ರವಾಗಿ ವಿವರವಾಗಿ ಚಿತ್ರಿಸುವ ಕೆಲಸ ವಾಲೀಕಾರರು ಮಾಡಿದ್ದಾರೆ. ಆ ಮೂಲಕ ಕನ್ನಡ ಸಾಹಿತ್ಯಕ್ಕೆ ತಾಯಿಬೇರು ಜನಪದವೆಂಬುದನ್ನು ಅರಿತುಕೊಂಡೇ ತತ್ವ ಸಾಹಿತ್ಯ ಜೀವನದಲ್ಲಿ ಜಾನಪದವನ್ನು ತುಂಬಿದ್ದಾರೆ. ಹೈದರಾಬಾದ್ ಕರ್ನಾಟಕದ ಗ್ರಾಮದೇವತೆಗಳು, ದೇವದಾಸಿರ ಸಮಗ್ರ ಸಂಪುಟ, ಒಂದು ಗ್ರಾಮದ ಜಾನಪದೀಯ ಅಧ್ಯಯನ, ಮೊಹರಂ ಪದಗಳು, ತ್ರಿಪದಿಗಳು ಮುಂತಾದ ಕೃತಿಗಳನ್ನು ಅವರು ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸಿ, ವಿಶ್ಲೇಷಿಸಿ, ಪರಿಪಾಲಿಸಿ, ಪರಮಾರ್ಶಿಸಿ ಸಂಶೋಧಿಸುವ ಕಾರ್ಯವನ್ನು ಕೈಗೊಂಡಿದ್ದಾರೆ. ಇವರು ಈಗಾಗಲೇ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ನಾಟಕ ಅಕಾಡೆಮಿ, ಸಾಹಿತ್ಯ ಅಕಾಡೆಮಿ, ಜಾನಪದ ಅಕಾಡೆಮಿ ಪ್ರಶಸ್ತಿಗಳು ಇವರಿಗೆ ಸಂದಿವೆ. ಕನ್ನಡ ಪುಸ್ತಕ ಪ್ರಾಧಿಕಾರ, ಗ್ರಂಥಾಲಯ ಆಯ್ಕೆ ಸಮಿತಿ, ಚಲನಚಿತ್ರ ಆಯ್ಕೆ ಸದಸ್ಯರಾಗಿದ್ದರು. ಸಾಹಿತ್ಯ ಸಂಘ, ಸಿರ್ ಮೇಕೆ ಗುಲಬರ್ಗಾ ಚಾಪ್ಟರ್, ಕರ್ನಟಕ ನಾಟಕ ಅಕಾಡೆಮಿಯ ಸದಸ್ಯ ಸಂಚಾಲಕರಾಗಿ ಕೆಲಸ ನಿರ್ವಹಿಸಿದ್ದಾರೆ. ಈ ಮಾಸ ಪತ್ರಿಕೆಯ ಗೌರವ ಸಂಪಾದಕರಾಗಿದ್ದಾರೆ. ಇವರ ಸಾಹಿತ್ಯ ರಂಗಸೇವೆಯನ್ನು ಪರಿಗಣಿಸಿ ಅಖಿಲ ಕರ್ನಾಟಕ ಮರಾಠಿ ಸಾಹಿತ್ಯ ಸಮ್ಮೇಳನ, ಸಮುದಾಯ ದ್ವಿದಶಮಾನೋತ್ಸವ, ಉಡುಪಿ ಮಠ, ಕರ್ನಾಟಕ ನಾಟಕ ಅಕಾಡೆಮಿ ಲಭಿಸಿವೆ. ಹೀಗೆ ಪ್ರಭಾಕರ ಸಾತಖೇಡ ಅವರು ಪ್ರತಿಭಾನ್ವಿತ ಕಲಾವಿದರು. ಸಾಹಿತಿಗಳು ಆಗಿದ್ದಾರೆ. ಅವರು ಕನ್ನಡ ನಾಡಿನ ಆಧ್ಯಾತ್ಮಿಕ ಕ್ಷೇತ್ರವಾದ ಮಂತ್ರಾಲಯವನ್ನು ಮಳಖೇಡಕ್ಕೆ ಹೋಲಿಸಿ ಅಲ್ಲಿನ ದಾಖಲೆಗಳನ್ನು ಬಿಸಿಲು ಬೆಳದಿಂಗಳಾದಾಗ ಎಂಬ ಪ್ರವಾಸ ಕಥನಗಳನ್ನು ರಚಿಸಿದ್ದಾರೆ. ಮಹಾರಾಷ್ಟ್ರ ರಾಜ್ಯದ ತುಂಬ ಹರಿಯುತ್ತಿರುವ ವೇಶ್ಯಾ ಸೋದರಿಯರ ಕಣ್ಣೀರ ಕಡಲಿನ ಕೋಗಿಲೆ ಗಾನ: ಮಹಾರಾಷ್ಟ್ರ ನಮ್ಮ ನೆರೆ ರಾಜ್ಯ. ಡಾ.ಚೆನ್ನಣ್ಣ ವಾಲೀಕಾರ ಅವರು ಈ ರಾಜ್ಯವನ್ನು ತಮ್ಮ ಪ್ರವಾಸಕ್ಕೆ ಆಯ್ದುಕೊಂಡ ಸ್ಥಳ. ಮಹಾರಾಷ್ಟ್ರ ರಾಜ್ಯದ ತುಂಬ ಹರಿಯುತ್ತಿರುವ ವೇಶ್ಯಾ ಸೋದರಿಯರ ಕಣ್ಣೀರ ಕಡಲಿನ ಕೋಗಿಲೆ ಗಾನ. ಇದು ಅವರ ಪ್ರವಾಸ ಕಥನ. ಇದು ಒಂದು ಸಾಮಾಜಿಕ ಸಮಸ್ಯೆಯನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಅಧ್ಯಯನ ಮಾಡಿದಂತಿದೆ. ತಮ್ಮ ಪ್ರವಾಸದುದ್ದಕ್ಕೂ ವೇಶ್ಯಯರ ಸಮಸ್ಯೆ, ವೇಶ್ಯಯರ ನಿವಾಸಗಳ ದುರಾವಸ್ಥೆ, ಅಲ್ಲಿಯ ಬಡತನ, ಅಜ್ಞಾನ, ಅಂಧಕಾರ, ಆಕ್ರಂದನ ಈ ಮುಂತಾದವುಗಳನ್ನು ಕಣ್ಣಿಗೆಟ್ಟುವಂತೆ ದಾಖಲಿಸಿದ್ದಾರೆ. ಇಲ್ಲಿ ಪ್ರವಾಸಿಗರ ದೃಷ್ಟಿಕೋನ ಪೂರ್ವ ನಿರ್ಧಾರಿತವಾಗಿದೆ. ತಾವು ಎಲ್ಲಿ ಹೋದರೂ ವೇಶೈಯರನ್ನು ಕಾಣುವುದು, ಅದು ಉದ್ದೇಶಿತವೂ ಅಥವಾ ಆಕಸ್ಮಿಕವೋ ವೇಶೈಯರನ್ನು ಭೇಟಿಯಾಗುತ್ತಾರೆ. ಸ್ನೇಹಿತರನ್ನು, ಸಾಹಿತಿಗಳನ್ನು, ರಾಜಕಾರಣಿಗಳನ್ನು ಸಮಾಜ ಸುಧಾರಕರನ್ನು, ಹೋರಾಟಗಾರರನ್ನು, ಸಂಬಂಧಿಕರನ್ನು ಈ ಮುಂತಾದವರ ಭೇಟಿ ಸಂದರ್ಶನಗಳು ಪ್ರವಾಸದ ಪೂರಕ ಸಂಗತಿಗಳಾಗಿ ಬರುತ್ತವೆ. ಆದರೆ ಪೂರ್ಣ ಉದ್ದೇಶಿತ ಸಂದರ್ಶನ ಮಾತ್ರ ವೇಶೈಯರ ಕಣ್ಣೀರಿನ ಕಡಲಿನ ಆಳ ಕಾಣುವುದೇ ಆಗಿದೆ. ಒಂದು ತಿಂಗಳಿನ ಮಹಾರಾಷ್ಟ್ರದ ಪ್ರವಾಸದಲ್ಲಿ ಇಡೀ ರಾಜ್ಯವಲ್ಲದಿದ್ದರೂ ಪ್ರಾಥಿನಿಧಿಕವಾಗಿ ಕೆಲವು ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ರಾಯಚೂರಿನಿಂದ ಹುನಗುಂದದ ಮೂಲಕ ಪ್ರಾರಂಭವಾದ ಪ್ರವಾಸ ಕೊಲ್ಲಾಪುರ, ಬೆಳಗಾವಿ, ಪುಣೆ, ಮುಂಬಯಿ, ನಾಗಪುರ, ಔರಂಗಬಾದ್, ತುಳಜಾಪುರ, ಫಂಡರಾಪುರ ಮತ್ತು ಸೊಲ್ಲಾಪುರದಿಂದ ಮರಳಿ ರಾಯಚೂರಿಗೆ. ಹೀಗೆ ಇವರ ಪ್ರವಾಸ ಚೌಕಟ್ಟು. ಈ ಎಲ್ಲಾ ಸ್ಥಳಗಳಲ್ಲಿ ಲೇಖಕರು ಸ್ನೇಹಿತರ ಸಹಾಯದೊಂದಿಗೆ ನೋಡಬೇಕಾದ ಸ್ಥಳಗಳನ್ನು ನೋಡುತ್ತಾರೆ. ದೇವಾಲಯ, ಕೊಳಚೆ ಪ್ರದೇಶ, ಶ್ರಮಿಕ ಜನವಾಸ ಮುಂತಾದ ಏರಿಯಾಗಳಲ್ಲಿ ಸುತ್ತಾಡುವುದು ಇಡೀ ಪ್ರವಾಸದುದ್ದಕ್ಕೂ ಗೋಚರವಾಗುತ್ತದೆ. ಮುಗ್ಧ ಮಹಿಳೆಯರು ಪುರುಷ ಕಾಮದಾಹಕ್ಕೊಳಗಾಗಿ, ಬಲಿಪಶುಗಳಾಗಿ ಹೇಗೆ ತಮ್ಮ ಬದುಕನ್ನು ನರಕದ ನೋವನ್ನಾಗಿಸಿಕೊಂಡಿದ್ದಾರೆ. ಅದಕ್ಕೆ ಇಂದಿನ ಪುರುಷರ ದುಷ್ಟು ನಡವಳಿಕೆ, ಸ್ವಾರ್ಥ, ಬಡವರ ಬದುಕನ್ನು ತಮ್ಮ ಚಲ್ಲಾಟಕ್ಕೆ ಬಳಸಿಕೊಂಡು ಬೀದಿಪಾಲು ಮಾಡಿರುವುದನ್ನು ಕಂಡು ಲೇಖಕರ ಮನಕರಗುತ್ತದೆ. ಹಗಲಿನ ವೇಳೆ ತಾವು ಕಂಡ ಸ್ಥಳಗಳು ರಾತ್ರಿಯಲ್ಲಿ ಹೇಗಿರುತ್ತವೆಂಬ ಕುತೂಹಲ ಲೇಖಕರಿಲ್ಲಿದೆ. ಆದ್ದರಿಂದ ಅವತ್ತು ಕೋಲ್ಟಾಪುರ ಮಹಾಲಕ್ಷ್ಮಿ ದೇವಾಲಯ ಹಗಲಿನ ದೃಶ್ಯದಲ್ಲಿ ಭಿಕ್ಷಕರು, ಜೋಗತಿಯರು, ಜೋತಿಷ್ಯರನ್ನು, ಜವಳ ತೆಗೆಯಲು ಬಂದವರನ್ನು, ಪೂಜೆ ಮಾಡಲು ನಿಂತವರನ್ನು ಕಾಣುತ್ತಾರೆ. ರಾತ್ರಿಯಾದಂತೆ ಅವರಿಗೆ ಹಗಲಿನ ದೃಶ್ಯಗಳು ಮನಸ್ಸಿನಲ್ಲಿ ಆಲೋಚನೆಗೀಡಾಗುತ್ತವೆ. ಈ ರಾತ್ರಿಯ ವೇಳೆ ಅಲ್ಲಿ ಹೇಗಿರಬಹುದೆಂಬುದು ಅವರಿಗೆ ಕಾಡಿದ ತಕ್ಷಣವೇ ಎದ್ದು ಹೊರಡುತ್ತಾರೆ. ಹಗಲು ಹಾಗಿದ್ದು ದೇವಾಲಯ ರಾತ್ರಿಯಲ್ಲಿ ಹೇಗಿರವುದೆಂದು ತಿಳಿಯಲು ಹೊರಟೆ. ನಡೆಯುತ್ತಾ ನಡೆಯುತ್ತಾ ಬಂದಾಗ ಹಗಲಿನಲ್ಲಿದ್ದ ಗಲಾಟೆ, ಗದ್ದಲ ಗವಗವ ಮೌನವಾಗಿತ್ತು. ದೇವಾಲಯದ ಹಿಂಬದಿಯಲ್ಲಿ ಹತ್ತಾರು ಜನಗಳ ಮಧ್ಯೆ ಒಂದು ಹೆಣ್ಣು ಸಿಕ್ಕು ನರಳುತ್ತಿರುವುದು ಕೇಳಿಸತೊಡಗಿತು. 'ಛೋಡೋ ರೇ ಮಜೀ ಛೋಡೋ ರೇ ದೋ ಹೈ ಬೋಲಕೆ ಲಾಕೆ ದಸ್ ಅಯೆ ತೋ ಕ್ಯಾ ಕರೂಂಗೆ' ಅನ್ನುವ ಧ್ವನಿ ಕೇಳಿ ಅಲ್ಲಿಗೆ ಹೋಗುವುದು, ಪೋಲಿಸ್ ಪೋಲೀಸ್ ಎಂದು ಜೋರಾಗಿ ಕೂಗಿ ಆ ಗುಂಪನ್ನು ಓಡಿಸಿ. ಆ ಅಮಾಯಕೆಯನ್ನು ಕಷ್ಟದಿಂದ ಪಾರು ಮಾಡುವುದು. ಅವಳು ತನ್ನ ಮನೆಗೆ ಇವರನ್ನು ಕರೆದುಕೊಂಡು ಹೋಗಿ ತನ್ನ ಗೊಳಿನ ಕಥೆ ಹೇಳುತ್ತಾಳೆ. ಹೀಗೆ ಸಾಮಾನ್ಯವಾಗಿ ಈ ಪ್ರವಾಸದುದ್ದಕ್ಕೂ ಲೇಖಕರು ವೇಶ್ಯಯರನ್ನು ಭೇಟಿ ಮಾಡಿ ಅವರು ಈ ಸ್ಥಿತಿಗೆ ಬರಲು ಕಾರಣವೇನು ಎಂಬುದನ್ನು ಶೋಧಿಸಿದ್ದಾರೆ. ಅವರ ಸ್ಥಿತಿಗತಿಗೆ ಮನ ಕರಗುತ್ತದೆ. ದುಃಖ ಆವರಿಸುತ್ತದೆ. ಆಗ ಲೇಖಕರೇ ಕೋಗಿಲೆಯಾಗಿ ವೇಶ್ಯಾ ಪರಕಾಯ ಪ್ರವೇಶಿಸಿ ಕಣ್ಣೀರಿನ ಕಡಲನ್ನು ಹರಿಸುತ್ತಾರೆ. ಇಲ್ಲಿ ಲೇಖಕರು ವಿಷಯ ಸಂಗ್ರಹ, ಪರಿಚಯ, ಸಂದರ್ಶನ, ಸ್ನೇಹಪ್ರೀತಿ ಎಲ್ಲವನ್ನು ಗದ್ಯದಲ್ಲಿ ವೇಶೈಯರ ದುಃಖ, ಪರಿಸ್ಥಿತಿ, ಸಿಟ್ಟು, ಶಾಪ, ನೋವು, ಆಕ್ರಂದನ ಮುಂತಾದ ಭಾವಗಳನ್ನು ಪದ್ಯದಲ್ಲಿ ನಿರೂಪಿಸಿದ್ದಾರೆ. ಇದು ಗದ್ಯ-ಪದ್ಯ ಮಿಶ್ರಿತ ನಿರೂಪಣಾ ಶೈಲಿ. ವೇಶೈಯರ ಮನೋಭಿತ್ತಿಯನ್ನು ಹಾಡಾಗಿಸಿ, ಅಂತರಾಳದ ದುಃಖ ದುಗುಡಗಳನ್ನು ಹೊರ ಚೆಲ್ಲಿದ್ದಾರೆ. ತನ್ನ ಕುಡಿತದ ಖರ್ಚಿಗಾಗಿ ಹೆಂಡತಿಗೆ ಗಿರಾಕಿಗಳನ್ನು ತರುವ ಗಂಡ, ತಮ್ಮೆಲ್ಲರ ಹೊಟ್ಟೆ ಬಟ್ಟೆಗಾಗಿ ತಾಯಿಗೆ ಗಿರಾಕಿಗಳನ್ನು ಕರೆದೊಯ್ಯುವ ಮಕ್ಕಳು, ಸಿನಿಮಾ, ಹಿರೋಯಿನ್ ಆಗುವ ಕನಸು ಕಟ್ಟಿಕೊಂಡು, ಅಂಧದ ಆಸೆಗೆ ಬಲಿಬಿದ್ದು ಬದುಕನ್ನು ನರಕ ಮಾಡಿಕೊಂಡ ನತದೃಷ್ಟರು, ಯೌವ್ವನದಲ್ಲಿ ಹರದಾರಿಗಳಲ್ಲಿ ತಮ್ಮ ಶರೀರವನ್ನು ದುಡಿಸಿ. ಬೆಲೆಯಿಲ್ಲದಾಗ ಬೀದಿಪಾಲದ ಅಸಹಾಯಕರು, ದೇವರು-ದಿಂಡಿರು ಹೆಸರಿನಲ್ಲಿ ಜೋಗತಿ, ಬಸವಿಯಾಗಿ ಸಂಪ್ರದಾಯದ ಹೆಸರಿನಲ್ಲಿ ತಮ್ಮ ಮೈಯನ್ನು ಮಾರಿಕೊಳ್ಳುವ ಅಂಧಕರು ಈ ಮುಂತಾದ ವಿವಿಧ ಬಗೆಯ ವೇಶೈಯರ ಮಾದರಿಗಳನ್ನು ಇಲ್ಲಿ ಲೇಖಕರು ದಾಖಲಿಸಿದ್ದಾರೆ. ಅವರ ಈ ಸ್ಥಿತಿಗೆ ಕಾರಣಗಳು, ಅವರಲ್ಲಿಯ ಬಡತನ, ಅಜ್ಞಾನ, ಮೇಲ್ವರ್ಗದವರ ದೌರ್ಜನ್ಯಗಳೇ ಆಗಿವೆ. ಹೆಣ್ಣು ಎಂದರೆ ಭೋಗದ ವಸ್ತು ಎಂಬ ಪುರುಷ ಸಮಾಜದಲ್ಲಿ ಬಡವರ, ಕೆಳವರ್ಗದವರ ಅಸ್ಪೃಶ್ಯರ ಮಹಿಳೆ ಹೇಗೆ ಶೋಷಣೆಗೊಳಗಾಗುತ್ತಾಳೆಂಬ ಚಿತ್ರಣಗಳು ಇಲ್ಲಿವೆ. ದೇವರ ಹೆಸರಿನಲ್ಲಿ ಜೋಗತಿಯಾಗಿ ಮೈ ಮಾರಿಕೊಳ್ಳುವುದು, ಸಂಪ್ರದಾಯ ನಂಬಿಕೆಯಲ್ಲಿದ್ದ ಜನತೆಗೆ ಹಾಗೆ ಮಾಡುವುದು ದೇವರ ಸೇವೆ, ದೇವರಿಂದ ನಮಗೆ ಕೃಪೆಯಾಗುತ್ತದೆಂಬ ಅಜ್ಞಾನ ಭಾವ ಮನೆ ಮಾಡಿದೆ. ಯಾವುದೋ ರೋಗಕ್ಕೆ ಬಲಿಯಾದ ಮಗು, ಬೇವಿನ ನೀರಿನ ಸ್ನಾನದಿಂದ ಗುಣಮುಖವಾದರೆ ಅದು ಎಲ್ಲಮ್ಮನ ಕೃಪೆ ಎಂದು ತಿಳಿದು ಅವಳ ಹೆಸರಿನಲ್ಲಿ ಬೆಳೆದ ಹೆಣ್ಣನ್ನು ಬಿಡುವುದು. ಅವಳ ತಾರುಣ್ಯಕ್ಕೆ ಬೆಲೆಕಟ್ಟಿ ಬಳಸಿಕೊಳ್ಳುವ ಕಾಮುಕ ಮನಸ್ಸುಗಳು, ತಾರುಣ್ಯ ತೀರಿದ ಮೇಲೆ ತಿಪ್ಪೆಯ ಕಸಕ್ಕಿಂತ ಕಡೆಯಾಗಿ ಕೀಳು ಬದುಕು ನಡೆಸುವ ದುಸ್ಥಿತಿ, ಅನುಭವಿಸುವ ಅನೇಕ ವೇಶೈಯರ ಪ್ರಸಂಗಗಳನ್ನು ಲೇಖಕರು ತಮ್ಮ ಕಥನದಲ್ಲಿ ಕೊಟ್ಟಿದ್ದಾರೆ. ಗಂಡ ಕುಡಿಯುವುದಕ್ಕೆ ತನ್ನ ಹೆಂಡತಿ ಮೈಮಾರಿದ ಹಣಕ್ಕಾಗಿ ನೆಲಕ್ಕೆ ಹಾಕಿ ದನಕ್ಕೆ ಹೊಡೆದಂತೆ ಹೊಡೆಯುವ ಘಟನೆ, ಜನಗಳ ಮಧ್ಯದಲ್ಲಿ ಆ ಹೆಂಗಸು, 'ರಾಂಥೋಂಕೊ ಗಲ್ಲಿದೆ' ಎಂಬ ಜನರ ತಾತ್ಸಾರ್ಯದ ಮಾತು ಲೇಖಕರನ್ನು ಬಡಿದೆಚ್ಚರಿಸುತ್ತದೆ. ಇಂತಹ ಸಂದರ್ಭದಲ್ಲಿ ಲೇಖಕರು ಸಹಾಯಕ್ಕೆ ಹೋಗುವುದು. ಪ್ರವಾಸದುದ್ದಕ್ಕೂ ಕಾಣುತ್ತೇವೆ. ವೇಶೈಯರ ಗೋಳನ್ನು ಕೇಳಲು ಹೋದಾಗ, ಅವರು ಒಳ್ಳೆಯ ಗಿರಾಕಿಯೆಂದು ಖುಷಿಯಾಗುವುದು. ಆಗ ಲೇಖಕರು ತಾವದಕ್ಕೆ ಬಂದಿಲ್ಲ. ನಾನು ನಿಮ್ಮವನೆಂದು ಹೇಳಿ ಅವರ ಮನಸ್ಸು ಗೆದ್ದು, ಮೈಮಾರಿಕೊಳ್ಳವಂತವರು ಮತ್ತು ಅವರಿಗೆ ಒದಗಿದ ಪ್ರಸಂಗಗಳನ್ನು ಅರಿತುಕೊಳ್ಳುತ್ತಾರೆ. ಅದಕ್ಕೆ ಹಾರೈಕೆಯ ಮಾತುಗಳನ್ನು ಹೇಳಿ ಸಂತೈಸುತ್ತಾರೆ. ಇಲ್ಲಿ ಅವರ ಗೋಳು, ಆ ಗೋಳಿನ ಕಾರಣಗಳು ಮಾತ್ರ ಕಾಣುತ್ತೇವೆ. ಸಮಾಜದ ಪಿಡುಗು ಆಗುವ ಈ ವೇಶ್ಯಾ ಪದ್ಧತಿಯನ್ನು ಹೇಗೆ ನಿವಾರಿಸಬಹುದೆಂಬುದಕ್ಕೆ ಪರಿಹಾರ ಸೂಚನೆಗಳಿಲ್ಲ. ಈ ಪ್ರವಾಸ ಕಥನದಲ್ಲಿ ಪ್ರಮುಖವಾಗಿ ವೇಶ್ಯಯರ ಸಮಸ್ಯೆಯನ್ನು ಬಿಟ್ಟರೆ, ಡಾ.ಅಂಬೇಡ್ಕರ್ ಚಿಂತನೆ, ದಲಿತ ಪ್ಯಾಂಥರ್ಸ್, ಚಿಂತಕರ, ಲೇಖಕರ, ಕವಿಗಳ, ರಾಜಕಾರಣಿಗಳು ವಿಷಯಗಳೇ ಬರುತ್ತವೆ. ದಲಿತರಲ್ಲಿಯೂ ಅಧಿಕಾರ, ವೈಯಕ್ತಿಕ ಸ್ವಾರ್ಥಕ್ಕಾಗಿ ಒಗ್ಗಟ್ಟು ಒಡೆದುಹೋಗಿದೆ. ನಾಯಕತ್ವಕ್ಕಾಗಿ ಕಚ್ಚಾಡುವ ಭಿನ್ನಾ ಭಿನ್ನಾ ಬಣಗಳಾಗಿರುವುದು, ಪರಸ್ಪರ ವೈಮನಸ್ಸುಳಾಗಿರುವುದನ್ನು ಕಾಣುತ್ತಾರೆ. ರಾಜಾಡಾರೆ, ನಾಮದೇವ ದಡ್ಡಳರು ಇವರೆಲ್ಲರನ್ನು ಭೇಟಿಯಾಗಲು ಲೇಖಕರು ಹೋದಾಗ, ಕ್ಷುಲ್ಲಕ ಕಾರಣಗಳಿಗಾಗಿ, ಇವರು ಲೇಖಕರನ್ನು ಕಡೆಗಣಿಸುವುದು. ವಿನಾಯಕ ವಾಗ್ವಾಡೆ ಈ ಕುರಿತು ವಿವರಗಳನ್ನು ಕೊಡುತ್ತಾನೆ. ವಿನಾಯಕನನ್ನು ತನ್ನೊಂದಿಗೆ ಬಂದಿದ್ದೀಯಾ, ಅದಕ್ಕಾಗಿ ನಾನು ನಿನ್ನೊಂದಿಗೆ ಮಾತನಾಡುವುದಿಲ್ಲವೆಂದು ನಿಷ್ಟುರವಾಗಿ ಹೇಳಿ ಕಳಿಸುವ ಪ್ರಸಂಗ ಇವೆಲ್ಲ ಮನುಷ್ಯನ ಸಣ್ಣತನವನ್ನು ಬಯಲುಗೊಳಿಸುತ್ತದೆ. ವೇಶ್ಯಯರ ಸಮಸ್ಯೆಯನ್ನು ಕುರಿತು ಚಿಂತಿಸುವಾಗ ಪ್ರವಾಸಿಗರಾಗಿ ಇವರು ಕೇವಲ ದಲಿತ ಮಹಿಳೆಯರು ಮಾತ್ರ ಈ ವೃತ್ತಿ ಮಾಡುತ್ತಾರೆಂದು ಗ್ರಹಿಸಿದಂತಿದೆ. ಇದಕ್ಕೊಂದು ಅವರು ಕೊಡುವ ಪ್ರಸಂಗ. ಒಂದು ಸಲ ತಾವು ಇಳಿದುಕೊಂಡಿರುವ ನಿವಾಸದ ದಾರಿ ತಪ್ಪಿ ರಾತ್ರಿ ವೇಶೈಯರ ಓಣಿಗೆ ಹೋಗುತ್ತಾರೆ. ಅಲ್ಲಿನ ಹೆಂಗಸರೆಲ್ಲ ಸುತ್ತುಗಟ್ಟುತ್ತಾರೆ. ಭಯಭೀತರಾಗಿ ತನ್ನನ್ನು ಸಾಯಿಸುವರೋ, ತನ್ನಲ್ಲಿಯ ಹಣ ದೋಚುವರೋ ಎಂದರಿತು ಮೈ ಅಂಬೇಡ್ಕರ್ ಕಾ ಆತ್ಮ ಹೈಂ ಎಂದು ಕೂಗಿ ಕೊಂಡಾಗ ಅವರೆಲ್ಲ ಬಿಟ್ಟು ಹೋದರು ಎಂದು ದಾಖಲಿಸುತ್ತಾರೆ. ಓದುಗರಲ್ಲಿ ಅಂಬೇಡ್ಕರ್ ಜಾತಿಯರೆಲ್ಲ ವೇಶೈಯರೆಂದೆ ಭಾಸವಾಗುವಂತೆ ನಿರೂಪಣೆಗೊಂಡಿದೆ. ಒಂದು ವೇಳೆ ಅಂಬೇಡ್ಕರ್ ವೇಶೈಯರಿಗೆ ಚೆನ್ನಾಗಿ ಗೊತ್ತಿದ್ದರೆ ಅವರೆಲ್ಲಾ ಆ ಕೆಲಸಕ್ಕೆ ಇಳಿಯಲು ಸಾಧ್ಯವಿಲ್ಲ. ದಲಿತ ಹೆಂಗಸರೆಲ್ಲರೂ ವೇಶೈಯರಲ್ಲ ಮೇಲ್ಟಾತಿಯ ಹೆಂಗಸರೆಲ್ಲ ಸಾವಿತ್ರಿಯರಲ್ಲ ಎಂಬ ತಿಳುವಳಿಕೆ ನನ್ನದು. ಇಂದು ವೇಶೈಯಲ್ಲಿ ದಲಿತರಲ್ಲದೆ ಅನೇಕ ಮೇಲ್ವಾತಿಯ ಹೆಂಗಸರೂ ಕೂಡ ಇರುವುದು ಕಾಣುತ್ತೇವೆ. ಸೋಲ್ಲಾಪುರ, ಫಂಡರಾಪುರ, ತುಳಜಾಪುರ ಸ್ಥಳಗಳಲ್ಲಿ ನಡೆದ ಘಟನೆಗಳು ಓದುಗರ ಮನಸ್ಸನ್ನು ಒಂದು ಕ್ಷಣ ಚಿಂತೆಗೀಡು ಮಾಡುತ್ತವೆ. ಇಲ್ಲಿ ಜೋಗುತಿಯರು ಹಣಕ್ಕಾಗಿ ಕಚ್ಚಾಡುವುದು, ಹಿರಿಯ ಜೋಗುತಿಯ ಕಿರಿಯ ಜೋಗುತಿಯರಿಗೆ ಗಿರಾಕಿಗಳನ್ನು ಸೆಳೆಯುವುದು ಈ ಮುಂತಾದ ಪ್ರಸಂಗಗಳು ವೇಶ್ಯಯ ಅವಸ್ಥೆಯ ನಿಚ್ಚಳ ದಾಖಲೆಗಳಾಗಿವೆ. ಈ ಪ್ರವಾಸವೂ ಕೇವಲ ವೇಶೈಯರ ವರದಿಯಲ್ಲದೆ ಅನೇಕ ವಿಚಾರಗಳನ್ನು ಗರ್ಭಿಕರಿಸಿಕೊಂಡಿದೆ. ಆದರೂ ಇವರು ಒಂದು ವರ್ಗ, ಒಂದು ಜಾತಿ ಜನತೆಯ ಸಮೀಕ್ಷೆಯನೋ ಎಂಬಂತಾಗುತ್ತದೆ. ಇಡೀ ಮಹಾರಾಷ್ಟ್ರ ಸಾಂಸ್ಕೃತಿಕ, ಸಾಹಿತ್ಯಕ, ಸಾಮಾಜಿಕ, ರಾಜಕೀಯ, ಆರ್ಥಿಕ ಬದುಕನ್ನು ಅಧ್ಯಯನ ಮಾಡುವಾಗ ಆ ಕೊರೆತೆಗಳನ್ನು ಇದು ಉಳಿಸಿಕೊಳ್ಳುತ್ತದೆ. ಯಾಕೆಂದರೆ ಪ್ರವಾಸದ ಮಿತಿ ವೇಶೈಯರ ಸಮಸ್ಯೆಗೆ ಮಿಗಿಲಾಗಿದೆ.

Discussion

Topics

More

Suggest a correction or report